Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಾರುಕಟ್ಟೆ ಇಲ್ಲದೆ ಕೊಳೆಯುತ್ತಿರುವ...

ಮಾರುಕಟ್ಟೆ ಇಲ್ಲದೆ ಕೊಳೆಯುತ್ತಿರುವ ಟನ್‌ಗಟ್ಟಲೇ ಪೈನಾಪಲ್ !

ಸಂಕಷ್ಟದಲ್ಲಿ ಉಡುಪಿ ಜಿಲ್ಲೆಯ ಬೆಳೆಗಾರರು, ನೆಲಕಚ್ಚಿದ ಅನಾನಸ್ ದರ

ನಝೀರ್ ಪೊಲ್ಯನಝೀರ್ ಪೊಲ್ಯ12 April 2020 12:55 PM IST
share
ಮಾರುಕಟ್ಟೆ ಇಲ್ಲದೆ ಕೊಳೆಯುತ್ತಿರುವ ಟನ್‌ಗಟ್ಟಲೇ ಪೈನಾಪಲ್ !

ಉಡುಪಿ : ಕೊರೋನ ನಿಯಂತ್ರಣಕ್ಕಾಗಿ ಸರಕಾರ ವಿಧಿಸಿರುವ ಲಾಕ್‌ಡೌನ್‌ನಿಂದ ಜಿಲ್ಲೆಯ ಪೈನಾಪಲ್ ಬೆಳೆಗಾರರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಎಪ್ರಿಲ್-ಮೇ ತಿಂಗಳಲ್ಲಿ ಬಹುಬೇಡಿಕೆ ಇರುವ ಈ ಬೆಳೆಯನ್ನು ಈಗ ಒಂದಂಕಿಯ ದರಕ್ಕೂ ಖರೀದಿಸುವವರು ಇಲ್ಲದಂತಾಗಿದೆ. ಇದಕ್ಕೆ ಮಾರುಕಟ್ಟೆ ಕಲ್ಪಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಉಡುಪಿ ಜಿಲ್ಲಾದ್ಯಂತ ಸುಮಾರು 80-85 ಬೆಳೆಗಾರರು ಸುಮಾರು 400ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಪೈನಾಪಲ್ ಬೆಳೆಸುತ್ತಿದ್ದು, ಕಳೆದ 15 ದಿನಗಳಲ್ಲಿ ಅಂದರೆ ಲಾಕ್‌ಡೌನ್ ವಿಧಿಸಿದ ನಂತರ ದಿನಗಳಲ್ಲಿ ಸುಮಾರು 800-1,000 ಟನ್‌ವರೆಗೆ ಇಳುವರಿ ಬಂದಿದೆ. ಇದೀಗ ಮತ್ತೆ 800ನಷ್ಟು ಇಳುವರಿ ಬರುವ ನಿರೀಕ್ಷೆ ಕೂಡ ಇದೆ.

ಉಡುಪಿ ತಾಲೂಕಿನಲ್ಲಿ 22.18 ಹೆಕ್ಟೇರ್, ಬ್ರಹ್ಮಾವರ-23.45 ಹೆಕ್ಟೇರ್, ಬೈಂದೂರು-14.58 ಹೆಕ್ಟೇರ್, ಹೆಬ್ರಿ-93.70 ಹೆಕ್ಟೇರ್, ಕಾಪು- 15.43, ಕಾರ್ಕಳ-242.83, ಕುಂದಾಪುರ-54.94 ಹೆಕ್ಟೇರ್ ಪ್ರದೇಶದಲ್ಲಿ ಪೈನಾಪಲ್‌ಗಳನ್ನು ಬೆಳೆಸಲಾಗುತ್ತಿದೆ.

ಹೊರರಾಜ್ಯಗಳ ಸಾಗಾಟ ಸ್ಥಗಿತ: ಕೇರಳ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಪೈನಾಪಲ್ ಬೆಳೆಗೆ ಹೆಚ್ಚಿನ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯ ಕೆಲವು ರೈತರು ಪೈನಾಪಲ್ ಬೆಳೆಯನ್ನು ಬೆಳೆಸುವುದರತ್ತ ಹೆಚ್ಚಿನ ಒಲವು ತೋರಿಸುತಿದ್ದಾರೆ. ಅಲ್ಲದೆ ಕುಂದಾಪುರ ತಾಲೂಕಿನಾದ್ಯಂತ ಕೇರಳದಿಂದ ಬಂದು ನೆಲೆಸಿರುವ ಕೆಲವರು ಎಕರೆಗಟ್ಟಲೆ ಪ್ರದೇಶವನ್ನು ಲೀಸ್‌ಗೆ ಪಡೆದುಕೊಂಡು ಈ ಬೆಳೆಯನ್ನು ಬೆಳೆಸಿದ್ದರು.

ಪೈನಾಪಲ್‌ನಲ್ಲಿ ಕಿಂಗ್ ಮತ್ತು ಕ್ವೀನ್ ಎಂಬ ಎರಡು ವಿಧಗಳಿದ್ದು, ಇದರಲ್ಲಿ ಕ್ವೀನ್‌ಗೆ ಹೆಚ್ಚಿನ ಬೆಲೆ ಇದೆ. ಆದುದರಿಂದ ಉಡುಪಿ ಜಿಲ್ಲೆಯಲ್ಲಿ ಕ್ವೀನ್ ಪೈನಾಪಲ್‌ಗಳನ್ನು ಮಾತ್ರ ಬೆಳೆಸಲಾಗುತ್ತದೆ. ಕಳೆದ ವರ್ಷದವರೆಗೆ ಪೈನಾಪಲ್ ಕೆ.ಜಿ. ಒಂದಕ್ಕೆ 30-35ರೂ.ಗೆ ಕೇರಳ ಮತ್ತು ಉತ್ತರ ಭಾರತದ ರಾಜ್ಯಗಳಿಗೆ ಮಾರಾಟವಾಗುತ್ತಿದ್ದವು.

ಆದರೆ ಈ ಬಾರಿ ಸೀಸನ್‌ನಲ್ಲೇ ಕೊರೋನ ವೈರಸ್ ಭೀತಿಯಿಂದ ಲಾಕ್‌ಡೌನ್ ವಿಧಿಸಿರುವ ಪರಿಣಾಮ ಜಿಲ್ಲೆಯ ಗಡಿಗಳು ಬಂದ್ ಆಗಿ, ಕೇರಳ ಮತ್ತು ಉತ್ತರ ಭಾರತ ರಾಜ್ಯದವರು ಇಲ್ಲಿಗೆ ಬಂದು ಪೈನಾಪಲ್ ಖರೀದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯಲ್ಲಿಯೇ ಉಳಿದುಕೊಂಡ ಟನ್‌ಗಟ್ಟಲೆ ಪೈನಾಪಲ್‌ಗಳ ಬೆಲೆ ನೆಲಕಚ್ಚಿತು. ಇದನ್ನು ಕೆ.ಜಿ.ಗೆ ಒಂದಂಕಿ ದರಕ್ಕೂ ಜನ ಕೊಂಡು ಕೊಳ್ಳದ ಸ್ಥಿತಿ ಈಗ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಸ್ಥಳೀಯವಾಗಿ ಮಾರಾಟ: ಇದೀಗ ಈ ಸಮಸ್ಯೆಯಿಂದ ಕಂಗೆಟ್ಟಿರುವ ಬೆಳೆಗಾರರು ಕೊಳೆತು ಹಾಳಾಗುವುದಕ್ಕಿಂತ ಸಿಕ್ಕಷ್ಟು ಹಣ ಸಿಗಲಿ ಎಂಬ ಉದ್ದೇಶ ಇಟ್ಟುಕೊಂಡು ಉಳಿದ ಟನ್‌ಗಟ್ಟಲೆ ಪೈನಾಪಲ್‌ಗಳನ್ನುಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ.

ಸದ್ಯ ಉಡುಪಿ, ದ.ಕ. ಹಾಗೂ ಶಿವಮೊಗ್ಗ ಜಿಲ್ಲೆ ಗಳಿಗೆ ಪೈನಾಪಲ್‌ಗಳು ಮಾರಾಟವಾಗುತ್ತಿವೆ. ಹೊರ ರಾಜ್ಯಗಳಿಗೆ ಕೆ.ಜಿ. 35ರೂ.ಗೆ ಮಾರಾಟವಾಗುತ್ತಿದ್ದ ಪೈನಾಪಲ್, ಈಗ ಸ್ಥಳೀಯವಾಗಿ ಕೆ.ಜಿ.ಗೆ 7-8 ರೂ.ಗೆ ಮಾರಾಟ ವಾಗುತ್ತಿದೆ. ಈ ಸಂಬಂಧ ಆಯಾ ತಾಲೂಕಿನ ತೋಟಗಾರಿಕೆ ಇಲಾಖಾಧಿಕಾರಿಗಳು ಕೂಡ ಪೈನಾಪಲ್ ಮಾರಾಟಕ್ಕೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಕುಂದಾಪುರ ತಾಲೂಕಿನಲ್ಲಿ ಬೆಳೆದ ಪೈನಾಪಲ್‌ಗಳನ್ನು ಉಪ್ಪುಂದದಲ್ಲಿರುವ ಹಾಪ್‌ಕಾಮ್ಸ್ ಮೂಲಕ ರೈತರಿಂದ ನೇರವಾಗಿ ಸ್ಥಳೀಯವಾಗಿ ರುವ ರಖಂ ವ್ಯಾಪಾರಸ್ಥರಿಗೆ ಮಾರಾಟ ಮಾಡುವ ಕೆಲಸ ನಡೆಸಲಾಗುತ್ತಿದೆ. ಅದೇ ರೀತಿ ಹೊರ ಜಿಲ್ಲೆಗಳಿಗೂ ಕಳುಹಿಸುವ ಕೆಲಸ ನಡೆಯುತ್ತಿದೆ ಎಂದು ಕುಂದಾಪುರ ತಾಲೂಕು ಪ್ರಭಾರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ ತಿಳಿಸಿದ್ದಾರೆ.

ಎಲ್ಲೂ ಫಲಿಸದ ಪೈನಾಪಲ್ !

ನೂರಾರು ಟನ್ ಪೈನಾಪಲ್‌ಗಳು ಕೊಳೆಯುವುದನ್ನು ತಡೆಯುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬೆಳೆಗಾರರು ಹಾಗೂ ಅಧಿಕಾರಿ ಗಳು ವಿವಿಧ ಮಾರ್ಗಗಳನ್ನು ಕಂಡುಕೊಂಡರೂ, ಅವು ಯಾವುದು ಕೂಡ ನಿರೀಕ್ಷಿತ ಫಲ ನೀಡುತ್ತಿಲ್ಲ.

ಸಾಣೂರಿನಲ್ಲಿರುವ ಜಾನ್ ಡಿಸಿಲ್ವ ಅವರ ಗೇರುಬೀಜ ಫ್ಯಾಕ್ಟರಿಗೆ ವಿಶೇಷ ಅನುಮತಿಯನ್ನು ನೀಡಿ ಪೈನಾಪಲ್‌ಗಳನ್ನು ಡ್ರೈ ಮಾಡಿ ಮಾರಾಟ ಮಾಡುವ ಕಾರ್ಯಕ್ಕೆ ಕೈಹಾಕಲಾಯಿತು. ಇಲ್ಲಿ ಸ್ಥಳೀಯರೊಬ್ಬರು ಬೆಳೆದ ಸುಮಾರು ಒಂದು ಟನ್‌ನಷ್ಟು ಪೈನಾಪಲ್‌ಗಳನ್ನು ಡ್ರೈ ಮಾಡಲಾಯಿತು. ಆದರೆ ಇದಕ್ಕೆ ಯಾವುದೇ ಮಾರುಕಟ್ಟೆ ಇಲ್ಲದ ಕಾರಣ ಅದನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.

ಅದೇ ರೀತಿ ಹುಣ್ಸೆಮಕ್ಕಿಯಲ್ಲಿರುವ ಸುಧೀರ್ ಶೆಟ್ಟಿ ಎಂಬವರು ಆರಂಭಿಸಿರುವ ಫ್ಯಾಕ್ಟರಿಯಲ್ಲಿ ಪೈನಾಪಲ್‌ಗಳನ್ನು ಸ್ಲೈಸ್, ಪಲ್ಪ್ ಮತ್ತು ಕಾಕ್ಟೈಲ್‌ಗಳನ್ನು ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಬೆಳೆಸಿರುವ ಕ್ವೀನ್ ಪೈನಾಪಲ್‌ನಿಂದ ಇವುಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕೆ ಬೇಕಾಗಿರುವುದು ಕಿಂಗ್ ಪೈನಾಪಲ್. ಆದುದರಿಂದ ಇಲ್ಲಿಗೆ ಮಾರಾಟ ಮಾಡುವ ಪ್ರಯತ್ನ ಕೂಡ ಕೈಗೂಡಲಿಲ್ಲ. ಅದೇ ರೀತಿ ಹಾಪ್‌ಕಾಮ್ಸ್‌ಗಳಲ್ಲಿ ಶೇ.60ಕ್ಕಿಂತ ಹೆಚ್ಚು ಹಣ್ಣಾಗಿರುವ ಪೈನಾಪಲ್‌ಗಳನ್ನು ಖರೀದಿಸದಿರುವುದು ಕೂಡ ಬೆಳೆಗಾರಿಗೆ ದೊಡ್ಡ ಹೊಡೆತ ನೀಡುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಪೈನಾಪಲ್ ಬೆಳೆಸುತ್ತಿದ್ದು, ಪ್ರತಿ ವರ್ಷ ರಾಜಸ್ತಾನ, ಗುಜರಾತ್, ತಮಿಳುನಾಡುಗಳಿಂದ ಅವರೇ ವಾಹನದೊಂದಿಗೆ ಬಂದು ಕೆ.ಜಿ.ಗೆ 35 ರೂ. ನೀಡಿ ಪೈನಾಪಲ್ ಖರೀದಿಸುತ್ತಿದ್ದರು. ಈ ಬಾರಿ ಲಾಕ್‌ಡೌನ್‌ನಿಂದಾಗಿ ಎಲ್ಲವೂ ನೆಲೆಕಚ್ಚಿ ಹೋಗಿದೆ. ಈಗ ನಮ್ಮಲ್ಲಿ ಉಳಿದು ಕೊಂಡಿರುವ ಪೈನಾಪಲ್‌ಗಳನ್ನು ಖರೀದಿಸುವವರೇ ಇಲ್ಲವಾಗಿದೆ.

- ಸಚ್ಚಿದಾನಂದ ಪ್ರಭು, ಪೈನಾಪಲ್ ಬೆಳೆಗಾರರು, ಕಣಜಾರು

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X