ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಂದ ಮಾಸ್ಕ್ ತಯಾರಿ, ವಿತರಣೆ
ಕೊರೋನ ವೈರಸ್ ವಿರುದ್ಧ ಹೋರಾಟ

ಮಂಗಳೂರು : ಕೊರೋನ ವೈರಸ್‌ನಿಂದ ರಕ್ಷಿಸಿಕೊಳ್ಳಲು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ವಿದ್ಯಾರ್ಥಿಗಳು ಮನೆಯಲ್ಲಿ ಮಾಸ್ಕ್ ತಯಾರಿಸಿ, ಸ್ಥಳೀಯರಿಗೆ ವಿತರಿಸಿದರು.
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಫೀಫಾ ಮತ್ತು ಪ್ರಿಯಾ ಅವರು ಮಾಸ್ಕ್ ವಿನ್ಯಾಸಗೊಳಿಸಿದ್ದು, ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ವಸ್ತುಗಳಿಂದ ತಯಾರಿಸಲಾಗುತ್ತದೆ. ಕೊರೋನ ವೈರಸ್ ವಿರುದ್ಧ ಹೋರಾಡಲು ತಮ್ಮ ಕಡೆಯಿಂದ ಏನಾದರೂ ಮಾಡಬೇಕೆಂದು ವಿದ್ಯಾರ್ಥಿಗಳು ಹೇಳಿದರು. ಪಿಪಿಇ ಮತ್ತು ಎನ್ 95 ಮಾಸ್ಕ್ ಳ ಕೊರತೆಯೊಂದಿಗೆ, ಮನೆಯಲ್ಲಿ ಮಾಸ್ಕ್ ಗಳನ್ನು ತಯಾರಿಸುವುದು ಮತ್ತು ಬಳಸುವುದು ನಮ್ಮ ಕರ್ತವ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದು, ಇದರಿಂದಾಗಿ ವೈದ್ಯಕೀಯ ವೃತ್ತಿಪರರಿಗೆ ಮತ್ತು ನಮಗಾಗಿ ಹೋರಾಡುತ್ತಿರುವ ಇತರರಿಗೆ ಎನ್ 95 ಮಾಸ್ಕ್ ಗಳು ಸುಲಭವಾಗಿ ಲಭ್ಯವಿರುತ್ತವೆ.
ಬ್ಯಾರೀಸ್ ಸಮೂಹದ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ವಿದ್ಯಾರ್ಥಿಗಳ ಶ್ರಮ ಮತ್ತು ಕಾಳಜಿಯನ್ನು ಶ್ಲಾಘಿಸಿದರು. ಪ್ರಾಂಶುಪಾಲ ಡಾ. ಎಸ್.ಐ.ಮಂಜೂರ್ ಬಾಷಾ ಅವರ ಸಮಯೋಚಿತ ಕ್ರಮವನ್ನು ಪ್ರಶಂಸಿದರು. ಬಿಐಟಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಬೀಡ್ಸ್ ಮುಖ್ಯಸ್ಥರು ಮತ್ತು ಅಧ್ಯಾಪಕರು ಮಾಸ್ಕ್ ಗಳನ್ನು ಸ್ಥಳೀಯವಾಗಿ ವಿತರಿಸಿದ್ದಾರೆ.








