ಲಾಕ್‍ಡೌನ್ ನಡುವೆ ಸಂಚಾರಕ್ಕೆ ನಕಲಿ ಪಾಸ್ ಬಳಕೆ ಆರೋಪ: 6 ಮಂದಿ ಬಂಧನ

ಬೆಂಗಳೂರು, ಎ.12: ಲಾಕ್‍ಡೌನ್ ನಡುವೆ ಸಂಚಾರ ಮಾಡಲು ನಕಲಿ ಪಾಸ್ ಬಳಕೆ ಮಾಡುತ್ತಿದ್ದ ಆರೋಪದಡಿ ಚಾಲಕ ಸೇರಿ ಆರು ಮಂದಿಯನ್ನು ಕೆಜಿ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಚಾಲಕ ನದೀಂ ಸೇರಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳು ಪ್ರತಿ ಪಾಸ್‍ಗೆ 500 ರೂ. ನಿಗದಿ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಬಂಧಿತರಿಂದ ಕಾರು, ಬೈಕ್, ಜೆರಾಕ್ಸ್ ಯಂತ್ರ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಪಾಸ್‍ಗಳನ್ನು ಆಯಾ ವಿಭಾಗದ ಡಿಸಿಪಿ ಹೆಸರಿನಲ್ಲಿ ಸೃಷ್ಟಿಸಿ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಇನ್ನು ಎ.9 ರಂದು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ನಕಲಿ ಪಾಸ್ ಅಟಿಸಿಕೊಂಡು ಟೆಂಪೋ ಚಾಲಕ ತನ್ನ ವಾಹನ ಓಡಿಸುತ್ತಿದ್ದ ಎನ್ನಲಾಗಿದ್ದು, ತಕ್ಷಣ ಹಿಡಿದು ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story





