Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕೊರೋನ ವೈರಸ್ ನಿಂದ ಅತಂತ್ರ...

ಕೊರೋನ ವೈರಸ್ ನಿಂದ ಅತಂತ್ರ ಪರಿಸ್ಥಿತಿಯಲ್ಲಿ ಅನಿವಾಸಿ ಕನ್ನಡಿಗರು: ನೆರವಿಗಾಗಿ ರಾಜ್ಯ ಸರಕಾರಕ್ಕೆ ಮನವಿ

ವಾರ್ತಾಭಾರತಿವಾರ್ತಾಭಾರತಿ12 April 2020 5:57 PM IST
share
ಕೊರೋನ ವೈರಸ್ ನಿಂದ ಅತಂತ್ರ ಪರಿಸ್ಥಿತಿಯಲ್ಲಿ ಅನಿವಾಸಿ ಕನ್ನಡಿಗರು: ನೆರವಿಗಾಗಿ ರಾಜ್ಯ ಸರಕಾರಕ್ಕೆ ಮನವಿ

ದುಬೈ : ಕೊರೋನ ವೈರಸ್ ಹರಡುವ ಭೀತಿಯಿಂದ ಗಲ್ಫ್ ದೇಶಗಳು ಲಾಕ್ ಡೌನ್ ಜಾರಿಗೆ ತಂದ ಪರಿಣಾಮ ಅನಿವಾಸಿ ಭಾರತೀಯರು ಅತಂತ್ರರಾಗಿದ್ದು, ನೆರವಿಗಾಗಿ ದುಬೈ ಅನಿವಾಸಿ ಕನ್ನಡಿಗರ ಸಂಘಟನೆಯ ಪ್ರತಿನಿಧಿಗಳು ಕರ್ನಾಟಕ ಸರಕಾರ, ಕೇಂದ್ರದ ಸಂಸದರು, ರಾಜ್ಯದ ಶಾಸಕರು ಮತ್ತು ಕರ್ನಾಟಕ ರಾಜ್ಯ ನಿರ್ದೇಶಿತ ಅನಿವಾಸಿ ಭಾರತೀಯ ಪ್ರತಿನಿಧಿಗಳನ್ನು ಮನವಿ ಮಾಡಿದ್ದಾರೆ.

ನಮ್ಮ ದೇಶದ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಯ ಹಿಂದೆ ಹಲವಾರು ಅನಿವಾಸಿ ಭಾರತೀಯರ ಅಪಾರ ಪರಿಶ್ರಮವಿದ್ದು, ಅವರು ದೇಶದ ಅವಿಭಾಜ್ಯ ಅಂಗವಾಗಿದ್ದಾರೆ. ಸಾಹಸಿ ಬದುಕು ನಡೆಸುವ ಅನಿವಾಸಿಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅನಿವಾಸಿಗಳ ಅಪಾರ ಪರಿಶ್ರಮ ದಿಂದ ಹಲವಾರು ವಾಣಿಜ್ಯ ಸಂಸ್ಥೆಗಳು ಬಹುಮಹಡಿ ಕಟ್ಟಡಗಳು, ಶಾಲೆ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಆರಾಧನಾಲಯಗಳು, ಆಶ್ರಮಗಳು ಆಸ್ಪತ್ರೆಗಳು, ದೇಶದ ನಗರ ಹೀಗೆ ವಿವಿಧ ರೀತಿಯಲ್ಲಿ ಭಾರತದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದ ಅನಿವಾಸಿಗಳನ್ನು ಸರಕಾರಗಳು, ಸಂಘ ಸಂಸ್ಯೆಗಳು, ಜನ ನಾಯಕರು ಈಗ ಮರೆತ್ತಿದ್ದು ಯಾಕೆ ಎಂದು ಸಂಶಯ ಪಡುವಂತಾಗಿದೆ ಎಂದು ಅನಿವಾಸಿ ಕನ್ನಡಿಗರು ತಿಳಿಸಿದ್ದಾರೆ.

ಕೊರೋನ ಸಾಂಕ್ರಾಮಿಕ ರೋಗವು ವಿಶ್ವ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಅತಂತ್ರರಾಗಿದ್ದಾರೆ. ಮನೆಯ ಆರ್ಥಿಕ ಪರಿಸ್ಮಿತಿಯನ್ನು ಸುಧಾರಿಸಲು ಹೊರದೇಶಗಳಿಗೆ ದುಡಿಮೆಯನ್ನು ಆಶ್ರಯಿಸಿ ಹೋದ ಅನಿವಾಸಿಗಳು ಲಾಕ್ ಡೌನ್ ಪರಿಣಾಮ ಊರಿಗೆ ಹೋಗಲಾಗದೆ,  ವಿದೇಶದಲ್ಲೂ ಇರಲಾಗದೆ ಕಷ್ಟಪಡುವಂತಾಗಿದೆ. ಹಚ್ಚಿನ ಅನಿವಾಸಿ ಭಾರತೀಯ ಉದ್ಯೋಗಿಗಳು ಬಡ, ಮಧ್ಯಮ ವರ್ಗದವರಾಗಿದ್ದು ಒಂದೇ ಕೋಣೆಯಲ್ಲಿ 8-10 ಮಂದಿ ವಾಸಿಸುತ್ತಿದ್ದು, ಇನ್ನು ಕೆಲವರು ಕಂಪೆನಿ ಒದಗಿಸಿದ ಲೇಬರ್‌ ಕ್ಯಾಂಪ್ ಗಳಲ್ಲಿ ವಾಸಿಸುತ್ತಿದ್ದಾರೆ. ಈಗ ಕೆಲವರು ಕೆಲಸ ಕಳೆದು ಕೊಂಡಿದ್ದು, ಇನ್ನು ಕೆಲವರು ಕೋಣೆಯಲ್ಲಿ ಬಾಕಿಯಾಗಿದ್ದು ಇನ್ನು ಮುಂದೇನು? ಎಂಬ ಚಿಂತೆಯಲ್ಲಿ ದಿನದೂಡುತ್ತಿದ್ದಾರೆ.

ಗಲ್ಫ್ ರಾಷ್ಟ್ರಗಳು ಇಲ್ಲಿರುವ ಅನಿವಾಸಿಗಳ ಆರೋಗ್ಯ ಸುರಕ್ಷೆಯ ಬಗ್ಗೆ ಹೆಚ್ಚಿನ ಆರೈಕೆ ಮಾಡುತ್ತಿದ್ದು, ಆದರೂ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಹಚ್ಚಿನ ದೇಶಗಳು ಅನಿವಾಸಿಗಳಿಗೆ ಯಾವುದೇ ಷರತ್ತು ಇಲ್ಲದೆ ತಮ್ಮ ತಾಯ್ನಾಡಿಗೆ ಮರಳಲು ಅನುಮತಿ ನೀಡಿದರೂ ಭಾರತ ಸರಕಾರ ಈ ಬಗ್ಗೆ ಗಮನ ನೀಡದೆ ತಿರಸ್ಕರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿ ಇರುವ ಇತರ ಪ್ರಜೆಗಳಿಗೆ ಸುರಕ್ಷಿತವಾಗಿ ವಾಪಸು ಅವರ ಸ್ವದೇಶಕ್ಕೆ ಮರಳಿ ಹೋಗುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿ ಉಚಿತ ವಿಮಾನ ವ್ಯವಸ್ಥೆಯನ್ನು ಮಾಡಿಕೊಟ್ಟು ಆಯಾ ದೇಶದ ದೂತಾವಾಸ ಕಚೇರಿಯನ್ನು ಸಂಪರ್ಕಿಸಲು ತಿಳಿಸಿದೆ. ಆದರೆ, ಭಾರತ ಸರಕಾರವು ಈ ಬಗ್ಗೆ ಹೆಚ್ಚಿನ ಗಮನ ನೀಡದಿರುವುದು ಅನಿವಾಸಿ ಭಾರತೀಯರ ಆಕ್ರೋಶ ಮತ್ತು ತಳಮಳಕ್ಕೆ ಕಾರಣವಾಗಿದೆ ಎಂದು ಅನಿವಾಸಿಗರು ತಿಳಿಸಿದ್ದಾರೆ.

ಚುನಾವಣಾ ಸಂದರ್ಭ ಅನಿವಾಸಿಗಳ ಬದುಕಿನ ಸುರಕ್ಷತಾ ಯೋಜನೆಗಳ ಬಗ್ಗೆ ಮಾತಾಡುವ ರಾಜಕೀಯ ನಾಯಕರು ಇಂದು ಮೌನವಾಗಿದ್ದು, ಅನಿವಾಸಿಗಳ ಈಗಿನ ಸಮಸ್ಯೆಯ ಬಗ್ಗೆ ಯಾವುದೇ ಶಾಸಕ, ಸಂಸದ, ಜನ ಪ್ರತಿನಿಧಿಗಳು ಸರಕಾರದ ಗಮನ ಸೆಳೆಯದೆ ಮೂಕ, ಕಿವುಡ, ಅಂಧರಂತೆ ವರ್ತಿಸುತ್ತಿರುವುದು ಖೇದನೀಯವಾಗಿದ್ದು, ಇದರಿಂದಾಗಿ ಅಸಹಾಯಕರಾದ ಅನಿವಾಸಿಗಳು ಸಂಬಂಧಪಟ್ಟ ಅಧಿಕಾರ ವರ್ಗದ ಸಹಾಯದ ಹಸ್ತವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದೆ.

ಗಲ್ಫ್ ರಾಷ್ಟ್ರಗಳಾದ ಯು.ಎ.ಇ, ಸೌದಿ ಅರೇಬಿಯಾ, ಕುವೈತ್, ಒಮನ್, ಬಹರೈನ್ ಮತು ಕತರ್ ನಲ್ಲಿ ಸುಮಾರು 8 ಲಕ್ಷ ಅನಿವಾಸಿ ಕನ್ನಡಿಗರು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದುವರೆಗೆ ತಮ್ಮ ದೇಶದ, ರಾಜ್ಯದ ಮುಂದೆ ಕೈ ಚಾಚಿದವರಲ್ಲ, ಸ್ವಾಭಿಮಾನಿಗಳಾದ ಅನಿವಾಸಿ ಕನ್ನಡಿಗರು ಕೆಲವು ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಿದ್ದಾರೆ.

ಸರಕಾರವು ಆನ್ಲೈನ್ ರಿಜಿಸ್ಟರ್‌ ಮಾಡಿಸುವ ಮೂಲಕ ವಿದೇಶದಿಂದ ವಾಪಸು ಬರುವ ಅನಿವಾಸಿಗಳ ಮಾಹಿತಿ ಸಂಗ್ರಹ ಮಾಡುವುದು ಮತ್ತು ಊರಿಗೆ ಮರಳಲು ಅಗತ್ಯವಿರುವ ವಿಮಾನ ಸೌಕರ್ಯ ಒದಗಿಸಿ ಕೊಡುವುದು. ಊರಿಗೆ ಮರಳಲು ಆರ್ಥಿಕ ತೊಂದರೆ ಇರುವವರಿಗೆ ವಿಮಾನ ಮತ್ತು ಟಿಕೆಟ್ ವ್ಯವಸ್ಥೆ ಮಾಡಿ ಕೊಡುವುದು. ವಿಸಿಟ್ ವೀಸಾದ ಮೂಲಕ ಕೆಲಸ ಹುಡುಕಲು ಬಂದು ಬಾಕಿ ಆದವರು, ಕುಟುಂಬ ಸಂದರ್ಶನ ಮಾಡಲು ಬಂದ ಹಿರಿಯರು, ರೆಸಿಡೆಂಟ್ ವೀಸಾದಲ್ಲಿದ್ದು ಈಗ ವೀಸಾ ಅವಧಿ ಮುಗಿದವರು ಆಹಾರ, ವಸತಿಗಾಗಿ ತೊಂದರೆ ಪಡುತ್ತಿದ್ದು, ಅಂತವರನ್ನು ಕೂಡಲೇ ಮರಳಿ ಸ್ವದೇಶಕ್ಕೆ ತರಲು ಸೂಕ್ತ ವ್ಯವಸ್ಥೆ ಮಾಡುವುದು. ಸ್ವದೇಶಕ್ಕೆ ಮರಳಿದವರಿಗೆ ಸಾರ್ವಜನಿಕ ಕಟ್ಟಡಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಶಾಲಾ ಕಾಲೇಜು ಕಟ್ಟಡಗಳಲ್ಲಿ, ರೋಗ ಮುಕ್ತಿ ಹೊಂದುವ ತನಕ ಕ್ಯಾರಂಟೈನ್ ವ್ಯವಸ್ಯೆ ಮಾಡಿ ಕೊಡುವುದು. ಕ್ಯಾರಂಟೈನ್ ಅವಧಿ ಮುಗಿದ ಬಳಿಕ ಆರೋಗ್ಯ ಪರಿಶೀಲಿಸಿ ಅವರ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವುದು. ಕೊರೋನ ಸೋಂಕಿತ ಅನಿವಾಸಿಗಳಿಗೆ ಅಗತ್ಯವಾದ ಆಹಾರ ಸಾಮಗ್ರಿ ತಲುಪಿಸುವುದು, ಔಷಧಿಗಳನ್ನು ಒದಗಿಸುವುದು, ರೋಗ ತಡೆಗಟ್ಟಲು ಸ್ಯಾನಿಟೈಝರ್ ಮತ್ತು ಪಿಪಿಇ ಕಿಟ್ (ವೈಯಕ್ತಿಕ ರಕ್ಷಣಾ ಸಲಕರಣೆ) ತಲುಪಿಸುವ ಕಾರ್ಯದಲ್ಲಿ ಸರಕಾರ ಸಕ್ರಿಯ ಮೇಲ್ವಿಚಾರಣೆ ಮಾಡಬೇಕು ಎಂದು ಅನಿವಾಸಿ ಕನ್ನಡಿಗರ ಸಂಘಟನೆಯ ಪ್ರತಿನಿಧಿಗಳು ದುಬೈ ಅವರು ಕರ್ನಾಟಕ ಸರಕಾರ, ಕೇಂದ್ರದ ಸಂಸದರು, ರಾಜ್ಯದ ಶಾಸಕರು ಮತ್ತು ಕರ್ನಾಟಕ ರಾಜ್ಯ ನಿರ್ದೇಶಿತ ಅನಿವಾಸಿ ಭಾರತೀಯ ಪ್ರತಿನಿಧಿಗಳನ್ನು ಮನವಿ ಮಾಡಿದ್ದಾರೆ.

ವರದಿ : ನಾಸಿರ್ ದುಬೈ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X