ಬೆಂಗಳೂರು: ಲಾಕ್ ಡೌನ್ ಪರಿಶೀಲನೆಗೆ ರಸ್ತೆಗಿಳಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಎ.12: ಲಾಕ್‍ಡೌನ್ ಪ್ರಕ್ರಿಯೆ ಸಂಬಂಧ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಸ್ತೆಗಿಳಿದು ಪರಿಶೀಲನೆ ನಡೆಸಿದರು.
ರವಿವಾರ ನಗರದ ಯಶವಂತಪುರ ಮಾರುಕಟ್ಟೆ, ಸುಮ್ಮನಹಳ್ಳಿ, ವಿಜಯನಗರ ಸೇರಿದಂತೆ ಅನೇಕ ಕಡೆಯಲ್ಲಿ ಲಾಕ್‍ಡೌನ್ ಪರಿಶೀಲಿಸಿ, ಸ್ಥಳೀಯ ಸಿಬ್ಬಂದಿ ಬಳಿ ಮುಖ್ಯಮಂತ್ರಿ ಮಾಹಿತಿ ಪಡೆದರು.
ಬಳಿಕ ನಗರದ ವಿವಿಧ ವಾರ್ಡ್, ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಬಳಿಯೂ ಮಾಹಿತಿ ಪಡೆದ ಅವರು, ಎಲ್ಲರೂ ಲಾಕ್‍ಡೌನ್ ನಿಯಮ ಪಾಲನೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.






.jpg)
.jpg)
.jpg)
.jpg)
.jpg)

