ಅನಿವಾಸಿ ಭಾರತೀಯರನ್ನು ಕ್ವಾರೆಂಟೈನಲ್ಲಿಡಲು ಮೂಡಡ್ಕ ಸಂಸ್ಥೆ ಸಿದ್ಧ: ಇಸ್ಮಾಯಿಲ್ ತಂಙಳ್
ಬೆಳ್ತಂಗಡಿ : ಜೀವನೋಪಾಯಕ್ಕಾಗಿ ವಿದೇಶದಲ್ಲಿರುವ ನೂರಾರು ಕನ್ನಡಿಗರು ಕೊರೋನ ಭೀತಿಯಿಂದ ಸಂಕಷ್ಟದಲ್ಲಿದ್ದಾರೆ. ಹಲವು ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಸುರಕ್ಷತೆಯನ್ನು ಸರಕಾರವು ಖಚಿತಪಡಿಸಬೇಕೆಂದು ಮದೀನತ್ತುಲ್ ಮುನವ್ವರ ಮೂಡಡ್ಕ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಆಗ್ರಹಿಸಿದರು.
ಅನಿವಾಸಿ ಭಾರತೀಯರಿಂದಲೇ ಪ್ರಾರಂಭಗೊಂಡು ಧಾರ್ಮಿಕ, ಸಾಮಾಜಿಕ, ಮತ್ತು ಶೈಕ್ಷಣಿಕ ರಂಗಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ಗೈಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾ ಸಂಸ್ಥೆ ಅಲ್ ಮದೀನತುಲ್ ಮುನವ್ವರ ಎಜುಕೇಶನ್ ಟ್ರಸ್ಟ್ (ಎ.ಎಮ್.ಇ.ಸಿ.) ಯನ್ನು ಪ್ರವಾಸಿಗಳಿಗೆ ಅಗತ್ಯವಾದರೆ ಕ್ವಾರಂಟೈನ್ ಆಗಿ ನೀಡಲು ಸಿದ್ಧ ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ಉಪಾಧ್ಯಕ್ಷ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ಹಾಗೂ ಎ.ಎಮ್.ಇ.ಸಿ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ತಿಳಿಸಿರುತ್ತಾರೆ.
Next Story





