ವಲಸೆ ಕಾರ್ಮಿಕರು ವೈರಸ್ ಸಾಗಿಸುವ ವಾಹಕಗಳಾಗಬಹುದು: ವಿಶ್ವಬ್ಯಾಂಕ್ ಎಚ್ಚರಿಕೆ

ವಾಶಿಂಗ್ಟನ್, ಎ. 12: ಮನೆಗೆ ಮರಳುವ ವಲಸೆ ಕಾರ್ಮಿಕರು ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯನ್ನು ದಕ್ಷಿಣ ಏಶ್ಯದ ಸೋಂಕುರಹಿತ ಪ್ರದೇಶಗಳಿಗೆ ಸಾಗಿಸುವ ವಾಹಕಗಳಾಗಬಹುದು ಎಂದು ವಿಶ್ವಬ್ಯಾಂಕ್ ರವಿವಾರ ಎಚ್ಚರಿಸಿದೆ.
ದಕ್ಷಿಣ ಏಶ್ಯವು, ಅದರಲ್ಲೂ ನಗರ ಪ್ರದೇಶಗಳು ಜಗತ್ತಿನ ಅತ್ಯಧಿಕ ಜನಸಾಂದ್ರ ಪ್ರದೇಶಗಳ ಪೈಕಿ ಒಂದಾಗಿದೆ. ಹಾಗಾಗಿ, ಈ ವಲಯದಲ್ಲಿ ಸ್ಥಳೀಯ ಮಟ್ಟದಲ್ಲಿ ಕೊರೋನವೈರಸ್ ಹರಡುವಿಕೆಯನ್ನು ತಡೆಯುವುದು ಅಗಾಧ ಸವಾಲಾಗಿದೆ ಎಂದು ರವಿವಾರ ಬಿಡುಗಡೆಗೊಂಡ ‘ದಕ್ಷಿಣ ಏಶ್ಯ ಆರ್ಥಿಕತೆ ಪರಿಷ್ಕರಣೆ: ಕೋವಿಡ್-19 ಪರಿಣಾಮ’ ಎಂಬ ವರದಿಯಲ್ಲಿ ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಅತ್ಯಧಿಕ ಜನಸಾಂದ್ರತೆಯಿಂದಾಗಿ, ಮುಖ್ಯವಾಗಿ ಕೊಳೆಗೇರಿ ನಿವಾಸಿಗಳು ಮತ್ತು ವಲಸೆ ಕಾರ್ಮಿಕರು ಮುಂತಾದ ಅತ್ಯಂತ ದುರ್ಬಲ ವರ್ಗದ ಜನರಲ್ಲಿ ಕಾಯಿಲೆ ಹರಡುವ ಪ್ರಮಾಣ ಅಧಿಕವಾಗಿದೆ ಎಂದು ವರದಿ ಹೇಳಿದೆ.
Next Story





