ಸ್ಪೇನ್: 619ಕ್ಕೆ ಏರಿದ ಸಾವಿನ ಸಂಖ್ಯೆ

ಮ್ಯಾಡ್ರಿಡ್ (ಸ್ಪೇನ್), ಎ. 12: ಸ್ಪೇನ್‌ನ ದೈನಂದಿನ ಕೊರೋನವೈರಸ್ ಸಾವಿನ ಸಂಖ್ಯೆ ರವಿವಾರ 619ಕ್ಕೆ ಏರಿದೆ. ಮೂರು ದಿನಗಳ ಸತತ ಇಳಿಕೆ ದಾಖಲಿಸಿದ ಬಳಿಕ, ಸಾವಿನ ಸಂಖ್ಯೆ ಮತ್ತೆ ಹೆಚ್ಚಿದೆ.
ಇದರೊಂದಿಗೆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 16,972ಕ್ಕೆ ಏರಿದೆ. ಶನಿವಾರದ ದೈನಂದಿನ ಸಾವಿನ ಸಂಖ್ಯೆ 510 ಆಗಿತ್ತು. ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,66,019ಕ್ಕೆ ಏರಿದೆ.
Next Story





