ಕಾಜೂರು: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಆಡಳಿತದಿಂದ ಆಹಾರ ಸಾಮಗ್ರಿ ವಿತರಣೆ
ಬೆಳ್ತಂಗಡಿ, ಎ.13: ಲಾಕ್ ಡೌನ್ ನಿಂದ ಸಂಕಷ್ಟದ ಜೀವನ ನಡೆಸುತ್ತಿರುವ ಕಾಜೂರು ಜಮಾಅತ್‌ನ ಬಡವರ ಮನೆಗಳಿಗೆ ಕಾಜೂರು ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಆಡಳಿತ ಮಂಡಳಿ ವತಿಯಿಂದ ಅಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸಂಕಷ್ಟಕ್ಕೆ ಜಮಾಅತ್ ವ್ಯಾಪ್ತಿಯ ಮುನ್ನೂರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕರ್ ಸಿದ್ದೀಕ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಉಪಾಧ್ಯಕ್ಷ ಅಬ್ದುರ್ರಹ್ಮಾನ್, ಸದಸ್ಯರಾದ ಬದ್ರುದ್ದೀನ್, ಎನ್.ಎಂ.ಯಾಕೂಬ್, ಉಮರ್‌ಕುಂಞಿ, ಎ.ಯು.ಮುಹಮ್ಮದಲಿ, ಸಿದ್ದೀಕ್ ಕೆ.ಎಚ್., ಅಬ್ಬಾಸ್, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.
Next Story





