ಕಳವು ಪ್ರಕರಣ : ಆರೋಪಿ ಸೆರೆ
ಕೊಣಾಜೆ : ದೇರಳಕಟ್ಟೆಯ ನಾಟೆಕಲ್ ಆತ್ಮಶಕ್ತಿ ಸಹಕಾರಿ ಬ್ಯಾಂಕ್ ನಲ್ಲಿ ಕಳವು ಯತ್ನ ಮತ್ತು ಕುಕ್ಕುದಕಟ್ಟೆ ವೈನ್ ಶಾಪ್ ನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಜನಾಡಿ ಗ್ರಾಮದ ಕಲ್ಕಟ್ಟ ನಿವಾಸಿ ಅಬ್ದುಲ್ ಫಯಾನ್ (22) ಎಂದು ಗುರುತಿಸಲಾಗಿದೆ.
ಈತ ಮಂಜನಾಡಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕುಕ್ಕುದಕಟ್ಟೆಯ ವೈನ್ ಶಾಪ್ ಗೆ ನುಗ್ಗಿ ಅಪಾರ ಮೌಲ್ಯದ ಮದ್ಯವನ್ನು ಕಳ್ಳತನ ನಡೆಸಿದ್ದು ಅಲ್ಲದೆ ನಾಟೆಕಲ್ ಆತ್ಮಶಕ್ತಿ ಸಹಕಾರಿ ಬ್ಯಾಂಕ್ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಪುಣ್ಯಕೋಟಿನಗರ ಶಾಲೆ, ಕಳ್ಳರಕೋಡಿ ಶಾಲೆ, ಮುಡಿಪು ಶಾಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲೂ ಈತ ಪ್ರಮುಖ ಆರೋಪಿ. ಈತನಿಂದ ಸುಮಾರು 69 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





