ಅಮೆರಿಕ: ದಿನದಲ್ಲಿ 1,514 ಸಾವು

ವಾಶಿಂಗ್ಟನ್, ಎ. 13: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್‌ನಿಂದಾಗಿ 1,514 ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಸಂಖ್ಯೆಗಳು ರವಿವಾರ ತಿಳಿಸಿವೆ.
ಹೊಸ ಸಂಖ್ಯೆಯು ಹಿಂದಿನ ದಿನದ ಸಾವಿನ ಸಂಖ್ಯೆಯಾದ 1,920ಕ್ಕಿಂತ ಕಡಿಮೆಯಾಗಿದೆ.
ಇದರೊಂದಿಗೆ ಅಮೆರಿಕದಲ್ಲಿ ಕೊರೋನ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಕನಿಷ್ಠ 22,020ಕ್ಕೆ ಏರಿದೆ. ಇದು ಜಗತ್ತಿನ ಇತರ ಯಾವುದೇ ದೇಶಕ್ಕಿಂತ ಅಧಿಕವಾಗಿದೆ. ಅಮೆರಿಕವು ಕೊರೋನ ವೈರಸ್ ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಶನಿವಾರ ಹಿಂದಿಕ್ಕಿದೆ. ಅಮೆರಿಕದಲ್ಲಿ ಈವರೆಗೆ ದಾಖಲಾದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ ಈಗ 5,55,313ಕ್ಕೆ ಏರಿದೆ.
Next Story





