ಕೊರೋನ ವೈರಸ್: ಫ್ರಾನ್ಸ್ ನಲ್ಲಿ ಹೊಸದಾಗಿ 315 ಸಾವು; ಸಾವಿನ ಸಂಖ್ಯೆಯಲ್ಲಿ ಇಳಿಕೆ

ಪ್ಯಾರಿಸ್, ಎ. 13: ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಕೋವಿಡ್-19 ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಈ ಅವಧಿಯಲ್ಲಿ 315 ಸಾವುಗಳು ಸಂಭವಿಸಿವೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಇದು ಆ ದೇಶದ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳು. ಆರೈಕೆ ಮನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಇದರಲ್ಲಿ ಸೇರಿಲ್ಲ.
ಇದರೊಂದಿಗೆ ದೇಶದಲ್ಲಿ ಈವರೆಗೆ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆ 14,393ಕ್ಕೆ ಏರಿದೆ. ಒಂದು ದಿನದ ಮುಂಚೆ ದೇಶದಲ್ಲಿ 345 ಸಾವುಗಳು ವರದಿಯಾಗಿದ್ದವು.
ಫ್ರಾನ್ಸ್‌ನ ಆಸ್ಪತ್ರೆಗಳಲ್ಲಿ ಎಪ್ರಿಲ್ 6ರಂದು 605 ಸಾವುಗಳು ವರದಿಯಾಗಿದ್ದವು. ಅದು ಈವರೆಗಿನ ಒಂದು ದಿನದ ಗರಿಷ್ಠ ಸಂಖ್ಯೆಯಾಗಿದೆ.
Next Story