ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಕಾರ್ಯಾಚರಣೆ
ಉಡುಪಿ, ಎ.13: ಉಡುಪಿ ಜಿಲ್ಲೆಯಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಮಂಗಳವಾರದಿಂದ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಮುಂಜಾನೆ 7 ರಿಂದ ತೆರೆಯಲು ಸಹಾಯಕ ಔಷಧ ನಿಯಂತ್ರಕರಾದ ಕೆ. ನಾಗರಾಜ ಸೂಚನೆಗಳನ್ನು ನೀಡಿದ್ದಾರೆ.
ಇದರಂತೆ ಜಿಲ್ಲೆಯಲ್ಲಿರುವ ಉಡುಪಿಯ ಕಿನ್ನಿಮುಲ್ಕಿ, ಸಂತೆಕಟ್ಟೆ, ಮಲ್ಪೆ, ಮಣಿಪಾಲ, ಕಟಪಾಡಿ, ಸಾಲಿಗ್ರಾಮ, ಬೈಂದೂರು, ಬೆಳ್ಮಣ್ಣು, ಬೈಲೂರು, ಹಿರಿಯಡ್ಕ, ಕುಂದಾಪುರ, ಬ್ರಹ್ಮಾವರ, ಶಿರ್ವ ಕಾರ್ಕಳದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಮುಂಜಾನೆ 7 ಗಂಟೆಯಿಂದ ಕಾರ್ಯನಿರ್ವಸಲಿವೆ ಎಂದು ಪತ್ರಿಕಾ ಪಕಟಣೆಯಲ್ಲಿ ತಿಳಿಸಲಾಗಿದೆ.
Next Story





