ಮಿಥುನ್ ರೈ ನಿಲುವಿಗೆ ಸಿಪಿಎಂ ಆಕ್ಷೇಪ
ಮಂಗಳೂರು, ಎ.13: ಕಾಸರಗೋಡಿನ ನಾಗರಿಕರಿಗೆ ದ.ಕ. ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಬೇಕೆಂಬ ಯುವ ಕಾಂಗ್ರೆಸ್‌ನ ದ.ಕ.ಜಿಲ್ಲಾಧ್ಯಕ್ಷ ಮಿಥುನ್ ರೈಯ ನಿಲುವನ್ನು ಸಿಪಿಎಂ ಆಕ್ಷೇಪಿಸಿದೆ.
ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್‌ನ ಒಂದು ಹಂತದಲ್ಲಿ ಈ ರೀತಿಯ ತಡೆ ಸರಿ ಎಂದುಕೊಂಡರೂ ಆವಶ್ಯಕ ವಸ್ತುಗಳ ಸಾಗಾಟ, ತುರ್ತು ಆರೋಗ್ಯ ಚಿಕಿತ್ಸೆ, ತರಕಾರಿ ಹಣ್ಣು ಹಂಪಲು ಪೊಲೀಸರ ನಿಗಾದಲ್ಲಿ ಸಂಚರಿಸಲು ಅವಕಾಶ ನೀಡುವುದು ಅನಿವಾರ್ಯ. ಆದರೆ ರಾಷ್ಟ್ರೀಯ ಪಕ್ಷದ ಮುಖಂಡ ಮಿಥುನ್ ರೈ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಸಿಪಿಎಂ ಕಾರ್ಯದರ್ಶಿ ವಸಂತ ಆಚಾರಿ ಒತ್ತಾಯಿಸಿದ್ದಾರೆ.
Next Story





