ಬೈಂದೂರು ಮುಸ್ಲಿಂ ಒಕ್ಕೂಟದಿಂದ ಆಹಾರ ಕಿಟ್ ಗಳ ವಿತರಣೆ

ಬೈಂದೂರು, ಎ.13: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಅರೆಹೊಳೆ ಕಂತಿಹೊಂಡ ಪರಿಸರದ ಬಡ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ಇಂದು ವಿತರಿಸಲಾಯಿತು.
ಈ ಸಂದರ್ಭ ಒಕ್ಕೂಟದ ಬೈಂದೂರು ತಾಲೂಕು ಅಧ್ಯಕ್ಷ ಹಸನ್ ಮಾವಡ್, ಉಪಾಧ್ಯಕ್ಷ ನೌಷಾದ್ ನಾವುಂದ, ಜಿಲ್ಲಾ ಸಮಿತಿ ಸದಸ್ಯರಾದ ತಬ್ರೇಝ್ ನಾಗೂರು, ಮನ್ಸೂರ್ ಮರವಂತೆ ಮತ್ತು ಫಯಾಝ್ ಅಲಿ ಬೈಂದೂರು ಹಾಗೂ ಕೂರಗ ಸಂಘರ್ಷ ಸಮಿತಿ ಬೈಂದೂರು ತಾಲೂಕು ಕಾರ್ಯದರ್ಶಿ ಶೇಖರ್ ಮರವಂತೆ ಮತ್ತು ಪ್ರಭಾಕರ್ ಉಪಸ್ಥಿತರಿದ್ದರು.
Next Story





