ದ.ಕ. ಜಿಲ್ಲಾಡಳಿತದ ಕಾರ್ಯ ಪಡೆಯಲ್ಲಿ ಸ್ಥಾನವಿಲ್ಲ: ಜಿಪಂ ಸದಸ್ಯ ಅಸಮಾಧಾನ
ಗುರುಪುರ, ಎ.13:ಕೊರೋನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಲು ಅವಕಾಶವಿಲ್ಲದಂತಾಗಿದೆ ಎಂದು ಗುರುಪುರ ಜಿಪಂ ಸದಸ್ಯ ಯುಪಿ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ಯಾವುದಾದರೂ ಕಾರ್ಯ ಪಡೆಯಲ್ಲಿ ಜಿಪಂ ಸದಸ್ಯರ ಹೆಸರು ಸೇರಿಸಿ, ಜನಸೇವೆ ಮಾಡಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮಾಡಿಕೊಂಡಿರುವ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಈವರೆಗೆ ಕ್ಷೇತ್ರದ ಜನರತ್ತ ತೆರಳಲು ಕಾನೂನುಬದ್ಧ ಅವಕಾಶ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.
ಕೊರೋನ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರಿಗೆ ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ ಒದಗಿಸುವುದು ಕಷ್ಟವಾಗಿದೆ. ತಮ್ಮ ವಾಹನಗಳಲ್ಲಿ ಕಿಟ್ ತುಂಬಿಸಿ ಹೋಗುವಾಗ ಪೊಲೀಸರು ತಡೆಯುತ್ತಾರೆ. ಬಹುತೇಕ ಪರಿಚಯದ ಅಧಿಕಾರಿಗಳು ಈ ಸೇವೆಗೆ ಬೆಂಬಲ ನೀಡುತ್ತಾರೆ. ಕಾನೂನು ಬದ್ಧ ಅವಕಾಶ ಸಿಗದ ಕಾರಣ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
Next Story





