ಆರೋಗ್ಯ ಸಿಬ್ಬಂದಿಗೆ ದಿನಸಿ ಕಿಟ್ ನೀಡಿ ಪುತ್ರನ ಹುಟ್ಟುಹಬ್ಬ ಆಚರಿಸಿದ ಮೇಸ್ತ್ರಿ
ಎಡಪದವು, ಎ.13: ಕೆಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಎಡಪದವಿನ ಧನಂಜಯ ಮೇಸ್ತ್ರಿ ಕೊರೋನಾ ಸೋಂಕಿನ ವಿರುದ್ಧ ಹಗಲಿರುಳೆನ್ನದೆ ಸೇವಾ ಕಾರ್ಯದಲ್ಲಿ ನಿರತರಾಗಿರುವ ಎಡಪದವು ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವೈದ್ಯಕೀಯ ಸಿಬ್ಬಂದಿಯ ಸಹಿತ ಸುಮಾರು 30 ಕುಟುಂಬಗಳಿಗೆ ಧನ ಸಹಾಯ ಹಾಗೂ ಅಕ್ಕಿ-ದಿನಸಿ ಸಾಮಗ್ರಿಯ ಕಿಟ್ ವಿತರಿಸಿ ತನ್ನ ಪುತ್ರ ಧನುಷ್‌ನ ಹುಟ್ಟುಹಬ್ಬ ಆಚರಿಸಿದರು.
ಎಡಪದವು ಪಂಚಾಯತ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧನಂಜಯ ಮೇಸ್ತ್ರಿ, ಪತ್ನಿ ಯಶೋದಾ ಡಿ, ಪುತ್ರ ಧನುಷ್, ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಂಗಾಧರ, ಪಿಡಿಒ ಬೋಗಮಲ್ಲಣ್ಣ, ಲೆಕ್ಕ ಸಹಾಯಕ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
Next Story





