ಮಿತ್ತಬೈಲ್ ಮಸೀದಿಯಿಂದ ಸರ್ವ ಧರ್ಮಗಳ 1,175 ಕುಟುಂಬಗಳಿಗೆ ಕಿಟ್ ವಿತರಣೆ
ಬಂಟ್ವಾಳ, ಎ.13: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಇದರಿಂದ ಸಂಕಷ್ಟದಲ್ಲಿರುವ ಸರ್ವ ಧರ್ಮಗಳ ಅರ್ಹ ಕುಟುಂಬಗಳಿಗೆ ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಮಿತ್ತಬೈಲ್ ಜಮಾಅತ್ ವ್ಯಾಪ್ತಿಯ ಪೊನ್ನೋಡಿ, ಶಾಂತಿ ಅಂಗಡಿ, ತಾಳಿಪಡ್ಪು, ಮದ್ದ,ಪರ್ಲಿಯಾ, ನಂದರಬೆಟ್ಟು, ಕೊಡಂಗೆ, ಕೆಳಗಿನ ಮಿತ್ತಬೈಲ್, ಕೈಕಂಬ ಇಲ್ಲಿನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ 1,175 ಕುಟುಂಬಗಳಿಗೆ 12 ಲಕ್ಷ ರೂ. ವೆಚ್ಚದಲ್ಲಿ ಕಿಟ್ ಗಳನ್ನು ವಿತರಿಸಲಾಗಿದೆ.
ಕಿಟ್ ನಲ್ಲಿ ಅಕ್ಕಿ, ಮೆಣಸು, ತೊಗರಿ ಬೇಳೆ, ಈರುಳ್ಳಿ, ಚಾಹುಡಿ ಸಹಿತ ಅಗತ್ಯ ದಿನ ಬಳಕೆಯ ದಿನಸಿ ವಸ್ತುಗಳು ಇದ್ದು ಜಮಾಅತ್ ಕಮಿಟಿ, ಮಸೀದಿಯ ಅಧೀನ ಸಂಘಟನೆ ಮತ್ತು ದಾನಿಗಳ ಸಹಾಯದಿಂದ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಜಮಾಅತ್ ಕಮಿಟ್ ಪ್ರಕಟನೆ ತಿಳಿಸಿದೆ.
Next Story





