Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಭೀತಿ

ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಭೀತಿ

ಮೀನುಗಾರರ ಬದುಕು ಅತಂತ್ರ!

ಸತ್ಯಾ ಕೆ.ಸತ್ಯಾ ಕೆ.14 April 2020 12:42 PM IST
share
ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಭೀತಿ

ಮಂಗಳೂರು, ಎ.13: ಕಳೆದ ವರ್ಷದ ಜಲಪ್ರಳಯ, ಬಳಿಕ ತೂಫಾನ್, ಚಂಡಮಾರುತದ ಹಾವಳಿಯಿಂದ ಈಗಾಗಲೇ ತತ್ತರಿಸಿರುವ ಮೀನುಗಾರಿಕಾ ವಲಯ ಇದೀಗ ಕೋವಿಡ್-19ನ ಲಾಕ್‌ಡೌನ್‌ನಿಂದ ಅತಂತ್ರವಾಗಿದೆ. ಈ ಹಿಂದೆ ಮೀನಿನ ಕೊರತೆಯಿಂದ ಕಂಗೆಟ್ಟಿದ್ದ ಮೀನುಗಾರಿಕಾ ಕುಟುಂಬಗಳು ಇದೀಗ ಲಾಕ್‌ಡೌನ್‌ನಿಂದಾಗಿಯೂ ಭೀಕರ ಪರಿಣಾಮವನ್ನು ಎದುರಿಸಬೇಕಾದ ಭೀತಿಯಿಂದ ಕಂಗಾಲಾಗಿವೆ. ಬಂದರು ನಗರಿಯೆಂದೇ ಕರೆಯುವ ದ.ಕ. ಜಿಲ್ಲೆಯ ಬಹುಮುಖ್ಯ ಉದ್ಯಮಗಳಲ್ಲಿ ಒಂದು ಮೀನುಗಾರಿಕೆ. ದ.ಕ. ಜಿಲ್ಲೆಯೊಂದರಲ್ಲೇ ಸುಮಾರು 20,000ಕ್ಕೂ ಅಧಿಕ ಕುಟುಂಬಗಳು ಈ ಮೀನುಗಾರಿಕೆಯನ್ನೇ ಅವಲಂಬಿಸಿವೆ. ಮೀನುಗಾರಿಕೆ ಎಂದರೆ ಕೇವಲ ನದಿ, ಕಡಲಿನಲ್ಲಿ ಮೀನು ಹಿಡಿಯುವುದು ಹಾಗೂ ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಮೀನು ಬೋಟ್‌ಗಳಿಗೆ ಬೇಕಾದ ಡೀಸೆಲ್ ಪೂರೈಸುವ ಪಂಪ್‌ಗಳು, ಫಿಶ್ ಮೀಲ್, ಐಸ್‌ಪ್ಲಾಂಟ್, ಲೋಡ್- ಅನ್‌ಲೋಡ್ ಮಾಡುವವರು, ಮೀನು ಮಾರಾಟ ಮಾಡುವವರು, ಮೀನು ಸಾಗಿಸುವ ಲಾರಿ, ಟೆಂಪೊ ವಾಹನಗಳು, ಮೀನು ಕತ್ತರಿಸುವವರು ಹೀಗೆ ಈ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಹಾಗಾಗಿ ಈ ಉದ್ಯಮವನ್ನು ಅವಲಂಬಿಸಿರುವವರ ಸಂಖ್ಯೆ ಕೇವಲ ದಕ್ಷಿಣ ಕನ್ನಡದಲ್ಲಿಯೇ ಲಕ್ಷಾಂತರ.

ನಾಡದೋಣಿ, ಸಾಂಪ್ರದಾಯಿಕ, ಪರ್ಸಿನ್, ಗಿಲ್‌ನೆಟ್, ಟ್ರಾಲ್‌ಬೋಟ್ ಸೇರಿದಂತೆ ದ.ಕ. ದಲ್ಲಿ ಸುಮಾರು 3,000ಕ್ಕೂ ಅಧಿಕ ಸಣ್ಣ ಹಾಗೂ ದೊಡ್ಡ ಬೋಟುಗಳು ಈ ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ. ಕಳೆದ ವರ್ಷ ಜಲ ಪ್ರಳಯ ಮೀನುಗಾರಿಕೆಯನ್ನೂ ನಲುಗಿಸಿತ್ತು. ಮಳೆಗಾಲದ ನಿಷೇಧ ಅವಧಿ ಮುಗಿಸಿ ಆಗಸ್ಟ್‌ನಲ್ಲಿ ಆರಂಭವಾಗಬೇಕಾಗಿದ್ದ ಮೀನುಗಾರಿಕೆ ತೂಫಾನ್‌ನಿಂದಾಗಿ ಅಕ್ಟೋಬರ್ ವೇಳೆಗೆ ಸ್ವಲ್ಪ ಸುಧಾರಿಸಿತ್ತು. ಹಾಗಿದ್ದರೂ, ಸಮುದ್ರದಲ್ಲಿ ಮೀನಿನ ಕೊರತೆ ಮೀನುಗಾರರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಈ ವರ್ಷದ (2019-20ನೇ) ಸಾಲಿನ ಮೀನುಗಾರಿಕೆ ಅತಂತ್ರ ಸ್ಥಿತಿಯಲ್ಲಿದ್ದಾಗಲೇ ಕೊರೋನ ಸೋಂಕು ಮೀನುಗಾರರ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ಮೀನುಗಾರಿಕೆಯೂ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಎಪ್ರಿಲ್ 12ರಿಂದ ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಆದರೆ ಮೀನುಗಾರರ ಅತಂತ್ರ ಪರಿಸ್ಥಿತಿ ಮಾತ್ರ ಮುಂದುವರಿದಿದೆ.

‘‘ಮೀನುಗಾರಿಕೆಯ ಲಾಭದಾಯಕ ಅವಧಿಯೇ ಮಾರ್ಚ್‌ನಿಂದ ಮೇ ತಿಂಗಳು. ಆದರೆ ಕೊರೋನ ಸೋಂಕು ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಮಾ. 20ಕ್ಕೆ ಬಹುತೇಕ ಬೋಟುಗಳು ದಡ ಸೇರಿದ್ದವು. ಇನ್ನು ಈ ಲಾಕ್‌ಡೌನ್ ಎಷ್ಟು ಸಮಯದವರೆಗೆ ಮುಂದುವರಿಯಲಿದೆ ಎಂದು ಹೇಳಲಾಗದು. ಈ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿರುವುದರಿಂದ ಪರ್ಸಿನ್ ಸೇರಿದಂತೆ ಯಾಂತ್ರೀಕೃತ ಬೋಟುಗಳನ್ನು ಕಡಲಿಗೆ ಇಳಿಸುವಂತಿಲ್ಲ. ಅಷ್ಟರಲ್ಲಿ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಮೀನುಗಾರಿಕೆ ನಿಷೇಧಗೊಳ್ಳಲಿದೆ. ಕಳೆದ ಬಾರಿ ಆಗಸ್ಟ್ ಬಳಿಕ ತೂಫಾನ್, ಚಂಡಮಾರುತದಿಂದಾಗಿ ಮೀನುಗಾರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಇದೀಗ ಮತ್ತೆ ಈ ಸಂಕಷ್ಟ ಮೀನುಗಾರರ ಕುಟುಂಬವನ್ನು ಅದೆಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿಲಿದೆ ಎಂದು ಊಹಿಸುವುದೂ ಕಷ್ಟ’’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿ 3 ತಿಂಗಳ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಒಂದು ವೇಳೆ ಮೇ ಅಂತ್ಯಕ್ಕೆ ಪರಿಸ್ಥಿತಿ ಸುಧಾರಿಸಿ ಎಲ್ಲವೂ ಸಹಜ ಸ್ಥಿತಿಗೆ ಬಂದರೂ ಮೀನುಗಾರಿಕೆ ಉದ್ಯಮ ಚೇತರಿಕೆ ಸಾಧ್ಯವಿಲ್ಲ. ಮತ್ತೆ ಸುಮಾರು ಎರಡು ತಿಂಗಳು ಮೀನುಗಾರಿಕೆ ನಿಷೇಧ ಅವಧಿ. ಆ ಬಳಿಕದ ಪರಿಸ್ಥಿತಿ ಹೇಗಿರುವುದೋ. ಹಾಗಾಗಿ ಇತರ ಎಲ್ಲಾ ವಲಯಗಳೂ ಮೇ ಬಳಿಕ ಕಾರ್ಯಾರಂಭಿಸಿದರೂ ಮೀನುಗಾರಿಕೆ ಚೇತರಿಸಲು ಮತ್ತೆ ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನುತ್ತಾರೆ ನವೀನ್.

► ಹೆಚ್ಚುತ್ತಿರುವ ತಾಪಮಾನವೂ ಮೀನಿನ ಕೊರತೆಗೆ ಕಾರಣ: ‘‘ಇತ್ತೀಚಿನ ಕೆಲ ವರ್ಷಗಳಲ್ಲಿ ಸಮುದ್ರದಲ್ಲಿ ಗಾಳಿಯ ಜೊತೆಗೆ ತಾಪಮಾನ ಹೆಚ್ಚಾಗಿರುವುದರಿಂದ ನೀರಿನ ಹರಿಯುವಿಕೆಯ ವೇಗವೂ ತೀವ್ರಗೊಂಡಿದೆ. ಇದರಿಂದಾಗಿ ಮೀನು ಹಿಡಿಯಲು ಹಾಕುವ ಬಲೆ ಬಹು ಬೇಗ ಮುದ್ದೆಯಾಗಿ ಬಿಡುತ್ತದೆ. ಸಮುದ್ರದಲ್ಲಿ ಮೀನುಗಳಿಗೆ 22 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹಿತಕರ. ತಾಪಮಾನ ಹೆಚ್ಚಾದಂತೆ ಮೇಲ್ಮೈ ನೀರು ಬಿಸಿಯಾಗಿ ಮೀನು ಕೆಳ ಮುಖಕ್ಕೆ ಚಲಿಸುತ್ತದೆ. ಇದರಿಂದ ನೀರಿನಲ್ಲಿ ಉಪ್ಪಿನಾಂಶ ಜಾಸ್ತಿಯಾಗುತ್ತದೆ. ಇದು ಆಕ್ಸಿಜನ್ ಕೊರತೆಗೆ ಕಾರಣವಾಗುತ್ತದೆ. ಹಾಗಾಗಿ ಮೀನುಗಳು ಈ ಸಂದರ್ಭ ವಲಸೆ ಹೋಗುತ್ತವೆ. ಇದು ಕೂಡಾ ಮೀನುಗಳ ಕೊರತೆಗೆ ಕಾರಣ’’ ಎನ್ನುತ್ತಾರೆ ನವೀನ್ ಬಂಗೇರ.

► ಕಡಲ ಮಕ್ಕಳ ಅಳಲನ್ನು ಕೇಳುವವರ್ಯಾರು?: ಮೀನುಗಾರಿಕೆ ಉದ್ಯಮ ಅಸಂಘಟಿತ ವಲಯವಾಗಿದೆ. ಇಲ್ಲಿನ ಮೀನುಗಾರರು ಅಥವಾ ಕಾರ್ಮಿಕರಿಗೆ ಯಾವುದೇ ರೀತಿಯ ಭವಿಷ್ಯನಿಧಿಯಾಗಲಿ, ಇಎಸ್‌ಐ ಸೌಲಭ್ಯವಾಗಲಿ ಇಲ್ಲ. ಹಾಗಿದ್ದರೂ ಕಡಲ ಮಕ್ಕಳು ತಮ್ಮ ಜೀವದ ಹಂಗನ್ನು ತೊರೆದು ಕಡಲಿನಲ್ಲಿ ಮೀನಿನ ಬೇಟೆಯಾಡಿ ತಮ್ಮ ಕುಟುಂಬವನ್ನು ಸಾಕಿ ಸಲಹುವುದಲ್ಲದೆ, ಈ ಮೀನುಗಾರಿಕೆಯನ್ನೇ ಅವಲಂಬಿಸಿದ ಸಾವಿರಾರು ಕುಟುಂಬಗಳಿಗೆ ಬದುಕನ್ನು ನೀಡುತ್ತಾರೆ. ಜನರಿಗೆ ಪೌಷ್ಟಿಕ ಆಹಾರ ಒದಗಿಸುತ್ತಾರೆ. ರಫ್ತಿನ ಮೂಲಕ ಸರಕಾರಕ್ಕೂ ಆದಾಯ ಒದಗಿಸುತ್ತಾರೆ. ಇಂತಹ ಕಡಲ ಮಕ್ಕಳ ಬದುಕು ಅಸಹಾಯಕ ಪರಿಸ್ಥಿತಿಯಲ್ಲಿದೆ. ಸ್ವಾಭಿಮಾನಿಗಳಾಗಿರುವ ಈ ಮೀನುಗಾರರು ತಮ್ಮ ಜೀವನ ಸಂಕಷ್ಟದಲ್ಲಿದ್ದರೂ ಯಾರೆದುರೂ ಕೈ ಚಾಚಲಾರರು. ಒಟ್ಟಿನಲ್ಲಿ ಮೀನುಗಾರರು ಹಾಗೂ ಅವಲಂಬಿತರ ಬದುಕು ಬೀದಿಗೆ ಬೀಳುವ ಸ್ಥಿತಿಗೆ ತಲುಪಿದೆ.

ವರ್ಷದಲ್ಲಿ ಸುಮಾರು 6 ತಿಂಗಳು ಮಾತ್ರ ಮೀನುಗಾರಿಕೆಯ ಪಾಲಿಗೆ ಲಾಭದಾಯಕ ತಿಂಗಳು. ಅದರಲ್ಲಿ ಬಹುಮುಖ್ಯ ಮಾರ್ಚ್‌ನಿಂದ ಮೇ ತಿಂಗಳು. ಈ ಅವಧಿಯಲ್ಲಿ ಸಿಗುವ ಲಾಭದಲ್ಲಿ ಮೀನುಗಾರರು ತಮ್ಮ ಮುಂದಿನ ಮೂರು ತಿಂಗಳ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಿಡುತ್ತಾರೆ. ಆದರೆ ಈ ವರ್ಷದ ಆರಂಭದ ಮೀನುಗಾರಿಕಾ ಅವಧಿಯಲ್ಲಿ ತೂಫಾನ್, ಮೀನಿನ ಕೊರತೆಯಿಂದ ಶೇ. 80ಕ್ಕೂ ಅಧಿಕ ಬೋಟುಗಳು ನಷ್ಟವನ್ನೇ ಎದುರಿಸಬೇಕಾಯಿತು. ಕಳೆದ ಎರಡು ತಿಂಗಳಿನಿಂದ ಸರಕಾರದಿಂದ ಡೀಸೆಲ್‌ಗೆ ದೊರೆಯುತ್ತಿದ್ದ ಸಬ್ಸಿಡಿಯೂ ಬಂದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಸರಕಾರವನ್ನು ಕೇಳುವುದೂ ಸಮಂಜಸವಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲಕ್ಕೆ 3 ತಿಂಗಳ ವಿನಾಯಿತಿ ಇದೆ. ಆದರೆ ಜೂನ್ ನಂತರ ಎಲ್ಲವೂ ಸಹಜವಾದರೂ ಮೀನುಗಾರಿಕೆ ಇಲ್ಲದಿದ್ದರೆ ಆ ಬಳಿಕ ನಮ್ಮವರು ಸಾಲ ಮರು ಪಾವತಿ ಮಾಡುವುದಾದರೂ ಹೇಗೆ? ಸಾಲ ಮರುಪಾವತಿಯಾಗದಿದ್ದರೆ ನಮ್ಮ ಖಾತೆ ಎನ್‌ಪಿಎ ಆಗಲಿದೆ. ಆಗ ನಮಗೆ ಅಲ್ಪಾವಧಿ ಕಿರುಸಾಲ ಪಡೆದು ನಮ್ಮ ಮೀನುಗಾರಿಕೆ ನಡೆಸಲೂ ಸಾಧ್ಯವಾಗದು. ನಮ್ಮ ಸಮಸ್ಯೆಗಳ ಬಗ್ಗೆ ಈಗಾಗಲೇ ಮೀನುಗಾರಿಕಾ ಉಪ ನಿರ್ದೇಶಕರಿಗೆ ವೌಖಿಕವಾಗಿ ತಿಳಿಸಲಾಗಿದೆ. ಸರಕಾರ ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನಮ್ಮದು.

 ನವೀನ್ ಬಂಗೇರ, ಉಪಾಧ್ಯಕ್ಷ, ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ

share
ಸತ್ಯಾ ಕೆ.
ಸತ್ಯಾ ಕೆ.
Next Story
X