ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆಯಿಂದ ಕಿಟ್ ವಿತರಣೆ
ಮಂಗಳೂರು, ಎ.14: ಕೊರೋನ ಹಿನ್ನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಲ್ಪಟ್ಟು ವಿವಿಧ ಕಡೆಯಲ್ಲಿ ಸಂಕಷ್ಟದಲ್ಲಿರುವ ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ (ರಿ)ಯ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.
ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಸುಮಾರು 70 ಆಹಾರದ ಕಿಟ್‌ಗಳನ್ನು ಸಂಕಷ್ಟದಲ್ಲಿರುವವರ ಮನೆಗೆ ತೆರಳಿ ಹಸ್ತಾಂತರಿಸಿದರು. ಈ ಮಧ್ಯೆ ಹೊರ ರಾಜ್ಯ, ಹೊರ ಜಿಲ್ಲೆಗಳ ಕಾರ್ಮಿಕರ ಸಹಿತ ಮಧ್ಯಮ ವರ್ಗದ ಹಲವರಿಗೂ ಕಿಟ್ ವಿತರಿಸಿದರು.
Next Story





