ಜಮಾಅತ್ ಕಮಿಟಿಗಳು ಕಾರುಣ್ಯ ಸೇವೆಗೆ ಮುಂದಾಗಬೇಕು: ಖಾಝಿ ತ್ವಾಖಾ ಮುಸ್ಲಿಯಾರ್, ಮುಸ್ಲಿಂ ಸೆಂಟ್ರಲ್ ಕಮಿಟಿ ಕರೆ
ಲಾಕ್ಡೌನ್ ಅವಧಿ ವಿಸ್ತರಣೆ ಹಿನ್ನೆಲೆ

ಮಂಗಳೂರು, ಎ.14: ಕೊರೋನ ವೈರಸ್‌ನಿಂದಾಗಿ ವಿಶ್ವವು ನಲುಗಿ ಹೋಗಿದೆ. ಇದೀಗ ದೇಶಾದ್ಯಂತ ಲಾಕ್ ಡೌನ್‌ನ್ನು ಮೇ 3ರವರೆಗೆ ಮುಂದುವರಿಸಲಾಗಿದೆ. ಇದರಿಂದ ಬಡವರು, ಆಸಕ್ತರು ತುಂಬಾ ಸಮಸ್ಯೆಗೆ ಒಳಗಾಗಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಿಳಿ ಅಕ್ಕಿ, ಬೆಳ್ತಿಗೆ ಪೂರೈಕೆಯಾಗಿದ್ದರೂ ಕೂಡ ಕುಚ್ಚಿಲ ಅಕ್ಕಿ ಹಾಗೂ ಇತರ ಅತ್ಯವಶ್ಯಕ ಸಾಮಾನುಗಳು ಸಿಗುವುದು ಕಷ್ಟಕರವಾಗುತ್ತಿದೆ. ಪವಿತ್ರ ರಮಝಾನ್ ಕೂಡ ಸಮೀಪಿಸುತ್ತಿದೆ. ಹಾಗಾಗಿ ಎಲ್ಲಾ ಜಮಾಅತ್ ಕಮಿಟಿಯವರು ಜಾತಿ, ಮತ ನೋಡದೆ ಮೊಹಲ್ಲಾ ವ್ಯಾಪ್ತಿಯ ಎಲ್ಲರಿಗೂ ಆಹಾರ ಸಾಮಗ್ರಿ ವಿತರಿಸುವ ಮೂಲಕ ಕಾರುಣ್ಯ ಸೇವೆಗೆ ಮುಂದಾಗಬೇಕು ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಹಾಜಿ ಮನವಿ ಮಾಡಿದ್ದಾರೆ.
Next Story





