ದ.ಕ ಜಿಲ್ಲಾಡಳಿತದ ಪಾಸ್ ಎ.20ರವರೆಗೆ ಮುಂದುವರಿಕೆ

ಮಂಗಳೂರು,ಎ.14: ಕೊರೋನ ಸೋಂಕು ರೋಗ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್ ವೇಳೆ ಸಾರ್ವಜನಿಕರ ಅತ್ಯಗತ್ಯ ಸಾಮಗ್ರಿಗಳನ್ನು ಪೂರೈಸುವ ಸಲುವಾಗಿ ನೀಡಲಾದ ಪಾಸ್‌ಗಳನ್ನು ಎ.20ರವರೆಗೆ ಬಳಸಲು ಮಂಗಳೂರು ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಪ್ರತ್ಯೇಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೆ ನೀಡಿದ ಪಾಸ್‌ನ ಅವಧಿಯು ಎ.14ಕ್ಕೆ ಕೊನೆಗೊಳ್ಳಲಿದೆ. ಇದೀಗ ಮೇ.3ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಕಾರಣ ಎ.14ಕ್ಕೆ ಅಂತ್ಯಗೊಳ್ಳಲಿದ್ದ ಪಾಸ್ ವ್ಯವಸ್ಥೆಯನ್ನು ಎ.20ರವರೆಗೆ ಬಳಸಬಹುದಾಗಿದೆ ಎಂದು ತಿಳಿಸಲಾಗಿದೆ.
Next Story





