ಬೆಂಗಳೂರಿನ 36 ವಾರ್ಡ್ಗಳು 'ಕೊರೋನ ಹಾಟ್ ಸ್ಪಾಟ್'ಗಳು !

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.15: ಬಿಬಿಎಂಪಿ ವ್ಯಾಪ್ತಿಯ ಒಟ್ಟು 198 ವಾರ್ಡ್ಗಳ ಪೈಕಿ 36 ವಾರ್ಡ್ಗಳನ್ನು ಕೊರೋನ ವೈರಸ್ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ 3 ಕಿ.ಮೀ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಕೊರೋನ ವೈರಸ್ ಸೋಂಕು ಪ್ರಕರಣ ದಾಖಲಾದ ಪ್ರದೇಶಗಳನ್ನು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳ ಆಧಾರದಲ್ಲಿ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕೊರೋನ ವೈರಸ್ ಸೋಂಕು ಪ್ರಕರಣಗಳಿರುವ 36 ವಾರ್ಡ್ಗಳ 39 ಸ್ಥಳಗಳನ್ನು ಕೊರೋನ ಹಾಟ್ ಸ್ಪಾಟ್ಗಳೆಂದು ಗುರುತಿಸಲಾಗಿದ್ದು, ಅವೆಲ್ಲವೂ ರೆಡ್ ಝೋನ್ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಸೋಂಕಿತ ಪ್ರಕರಣಗಳು ಮತ್ತು ಆ ಸೋಂಕಿತರೊಂದಿಗಿನ ಪ್ರಾಥಮಿಕ ಸಂಪರ್ಕ ಹೊಂದಿರುವವರು ಹಾಗೂ ಕ್ವಾರಂಟೈನ್ ಆಧರಿಸಿ ಪ್ರದೇಶಗಳನ್ನು ವಿಂಗಡಣೆ ಮಾಡಲಾಗಿದ್ದು, ಅದರಲ್ಲಿ 39 ಸ್ಥಳಗಳು ರೆಡ್ಝೋನ್ನಲ್ಲಿ ಬರುತ್ತವೆ. ಅದೇ ವಾರ್ಡ್ಗಳಲ್ಲಿ ಪ್ರಾಥಮಿಕ ಸಂಪರ್ಕದಲ್ಲಿರುವ ಪ್ರಕರಣಗಳನ್ನು ಆಧರಿಸಿ ಹಳದಿ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕು ಪ್ರಕರಣ ದಾಖಲಾದ ಪ್ರದೇಶಗಳನ್ನು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳ ಆಧಾರದ ಮೇಲೆ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ಕಳೆದ 28 ದಿನಗಳಲ್ಲಿ ಯಾರಿಗಾದರೂ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದರೆ ಹಾಗೂ ಕೊರೋನ ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ 50 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ, ಆ ಪ್ರದೇಶವನ್ನು ಹಾಟ್ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ.
ಈ ಮಾನದಂಡಗಳ ಆಧಾರದ ಮೇಲೆ ಸದ್ಯ ನಗರದ 39 ಪ್ರದೇಶಗಳ ಪಟ್ಟಿ ಮಾಡಲಾಗಿದೆ. ಇಲ್ಲಿ ಉಳಿದ ಪ್ರದೇಶಗಳಿಗಿಂತ ತುಸು ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಹಾಟ್ ಸ್ಪಾಟ್ ವಾರ್ಡ್ಗಳು:
ವಾರ್ಡ್ ನಂ. 6 ಥಣಿಸಂದ್ರ,
ವಾರ್ಡ್ ನಂ. 18 ರಾಧಾಕೃಷ್ಣ ದೇವಸ್ಥಾನ,
ವಾರ್ಡ್ ನಂ. 25 ಹೊರಮಾವು,
ವಾರ್ಡ್ ನಂ. 35 ಅರಮನೆ ನಗರ,
ವಾರ್ಡ್ ನಂ. 54 ಹೂಡಿ,
ವಾರ್ಡ್ ನಂ. 59 ಮಾರುತಿಸೇವಾ ನಗರ,
ವಾರ್ಡ್ ನಂ. 67 ನಾಗಾಪುರ,
ವಾರ್ಡ್ ನಂ. 84 ಹಗದೂರು,
ವಾರ್ಡ್ ನಂ. 93 ವಸಂತನಗರ,
ವಾರ್ಡ್ ನಂ. 118 ಸುಧಾಮನಗರ,
ವಾರ್ಡ್ ನಂ. 128 ನಾಗರಬಾವಿ,
ವಾರ್ಡ್ ನಂ. 134 ಬಾಪೂಜಿನಗರ,
ವಾರ್ಡ್ ನಂ. 141 ಆಜಾದ್ ನಗರ,
ವಾರ್ಡ್ ನಂ. 149 ವರ್ತೂರು,
ವಾರ್ಡ್ ನಂ. 162 ಗಿರಿನಗರ,
ವಾರ್ಡ್ ನಂ. 171 ಗುರಪ್ಪನಪಾಳ್ಯ,
ವಾರ್ಡ್ ನಂ. 177 ಜೆಪಿನಗರ,
ವಾರ್ಡ್ ನಂ. 191 ಸಿಂಗಸಂದ್ರ,
ವಾರ್ಡ್ ನಂ. 7 ಬ್ಯಾಟರಾಯನಪುರ,
ವಾರ್ಡ್ ನಂ. 20 ಗಂಗಾನಗರ,
ವಾರ್ಡ್ ನಂ. 26 ರಾಮಮೂರ್ತಿನಗರ,
ವಾರ್ಡ್ ನಂ. 49 ಲಿಂಗರಾಜಪುರ,
ವಾರ್ಡ್ ನಂ. 57 ಸಿವಿರಾಮನ್ನಗರ,
ವಾರ್ಡ್ ನಂ. 62 ರಾಮಸ್ವಾಮಿ ಪಾಳ್ಯ,
ವಾರ್ಡ್ ನಂ. 82 ಗರುಡಾಚಾರ್ಪಾಳ್ಯ,
ವಾರ್ಡ್ ನಂ. 88 ಜೀವನ್ಭೀಮಾ ನಗರ,
ವಾರ್ಡ್ ನಂ. 107 ಶಿವನಗರ,
ವಾರ್ಡ್ ನಂ. 124 ಹೊಸಹಳ್ಳಿ,
ವಾರ್ಡ್ ನಂ. 132 ಅತ್ತಿಗುಪ್ಪೆ,
ವಾರ್ಡ್ ನಂ. 136 ಜಗಜೀವನ್ರಾಮ್ನಗರ,
ವಾರ್ಡ್ ನಂ. 147 ಆಡುಗೋಡಿ,
ವಾರ್ಡ್ ನಂ. 152 ಸದ್ದುಗುಂಟೆಪಾಳ್ಯ,
ವಾರ್ಡ್ ನಂ. 166 ಕರಿಸಂದ್ರ,
ವಾರ್ಡ್ ನಂ. 172 ಮಡಿವಾಳ,
ವಾರ್ಡ್ ನಂ. 179 ಶಾಕಾಂಬರಿನಗರ,
ವಾರ್ಡ್ ನಂ. 192 ಬೇಗೂರು.
ಬಿಬಿಎಂಪಿ ವ್ಯಾಪ್ತಿಯ ಬಾಪೂಜಿನಗರ ಹಾಗೂ ಪಾದರಾಯನಪುರ ವಾರ್ಡ್ಗಳನ್ನು ಸದ್ಯ ಬಿಬಿಎಂಪಿ ಸೀಲ್ಡೌನ್ ಮಾಡಿದೆ. ಈ ಎರಡು ವಾರ್ಡ್ಗಳಲ್ಲಿ ಯಾರೂ ಅನವಶ್ಯಕವಾಗಿ ಹೊರಗೆ ಬರದಂತೆ ಹಾಗೂ ಹೊರಗಿನಿಂದಲೂ ಯಾರೂ ಒಳಗೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯಕ್ಕೆ ನಗರದ ಬೇರೆ ಯಾವುದೇ ಪ್ರದೇಶವನ್ನು ಸೀಲ್ಡೌನ್ ಮಾಡುವ ಪ್ರಸ್ತಾವನೆ ಇಲ್ಲ.
-ಬಿ.ಎಚ್. ಅನಿಲ್ಕುಮಾರ್, ಬಿಬಿಎಂಪಿ ಆಯುಕ್ತ







