ಉಡುಪಿ: ರೆಡ್‌ಕ್ರಾಸ್‌ನಿಂದ ಕಾರ್ಮಿಕರಿಗೆ ಬೆಡ್‌ಶೀಟ್, ಮಾಸ್ಕ್ ವಿತರಣೆ

ಉಡುಪಿ, ಎ.15:ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಕರಾವಳಿ ಬೈಪಾಸ್ ಬಳಿ ಇರುವ ಸುಮಾರು 800 ಮಂದಿ ಕಾರ್ಮಿಕರಿಗೆ ಬುಧವಾರ ಮಾಸ್ಕ್, ಸಾಬೂನುಗಳ ಸಹಿತ ವಿವಿ ವಸ್ತುಗಳನ್ನು ವಿತರಿಸಲಾಯಿತು.
ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ರೆಡ್‌ಕ್ರಾಸ್ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಉಡುಪಿ ರೆಡ್‌ಕ್ರಾಸ್ ಘಟಕದ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಜಯರಾಮ ಆಚಾರ್ಯ, ಡಾ. ಸತೀಶ್ ಶೆಣ್ಯೆ, ಪೋಷಕ ಸದಸ್ಯ ಮಹಮ್ಮದ್ ವೌಲಾ ಉಪಸ್ಥಿತರಿದ್ದರು.
ಇದೇ ವೇಳೆ ಆಯ್ದ 100 ಮಂದಿ ಮಹಿಳೆಯರಿಗೆ ಸೀರೆಯನ್ನು ವಿತರಿಸಲಾಯಿತು. ಅಲ್ಲದೇ ಅಗತ್ಯವಿದ್ದ ಕಾರ್ಮಿಕರಿಗೆ ಬೆಡ್‌ಶೀಟ್ ಹಾಗೂ ಉಲ್ಲನ್ ರಗ್‌ಗಳನ್ನು ವಿತರಿಸಲಾುತು.
ಸಾಮಗ್ರಿಗಳ ವಿತರಣೆ ಸಂದರ್ಭದಲ್ಲಿ ಕಾರ್ಮಿಕರ ನಡುವೆ ಸಾಮಾಜಿಕ ಅಂತರ ಕಾಯುವಲ್ಲಿ ಮತ್ತು ವಸ್ತುಗಳ ವಿತರಣೆಯಲ್ಲಿ ಉಡುಪಿ ಜಿಲ್ಲೆಯ ಕೊರೋನಾ ಸೈನಿಕರು ಅಗತ್ಯ ಸಹಕಾರ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇದುವರೆಗೆ ಜಿಲ್ಲೆಯಲ್ಲಿ 17,000ಕ್ಕೂ ಅಧಿಕ ಅಸಂಘಟಿತ ಕಾರ್ಮಿಕರಿಗೆ ಸೋಪು ಮತ್ತು ಮಾಸ್ಕ್ ಗಳನ್ನು ವಿತರಿಸಿದ್ದು, ಜಿಲ್ಲೆಯ 123 ಗ್ರಾಮ ಪಂಚಾಯತ್‌ಗಳು ಹಾಗೂ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರಿಗೆ ಸೌಲಭ್ಯಗಳನ್ನು ವಿತರಿಸಲಾಗಿದೆ.







