ಪುತ್ತೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ಮನೆ ಮಾಡಿಕೊಂಡ ಉಪನ್ಯಾಸಕ

ಪುತ್ತೂರು: ಕೊರೋನ ಭೀತಿ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ಉಪನ್ಯಾಸಕರೊಬ್ಬರು ಮನೆಯ ಸಮೀಪದಲ್ಲಿ ಮರದಲ್ಲಿ ಮನೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಪುಣ್ಚಪ್ಪಾಡಿ ಗ್ರಾಮದ ನಡುಮನೆ ನಿವಾಸಿ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ವಿವೇಕ್ ಆಳ್ವ ಮರದಲ್ಲಿ ಮನೆ ಮಾಡಿಕೊಂಡ ವ್ಯಕ್ತಿ. ಅವರು ತನ್ನ ಮನೆಯ ಸಮೀಪದಲ್ಲಿರುವ ಕಾಡಿನಲ್ಲಿ ಒಂದು ಮರದ ಮೇಲೆ ಗುಡಿಸಲು ನಿರ್ಮಿಸಿಕೊಂಡು ಕಳೆದ 8 ದಿನಗಳಿಂದ ಅಲ್ಲಿಯೇ ವಾಸವಾಗಿದ್ದಾರೆ.
ಈ ವಾಸವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅದ್ಭುತವಾದ ಅನುಭವನ್ನು ನೀಡುತ್ತದೆ. ಮರದ ಮೇಲಿನ ಗುಡಿಸಲಿನಲ್ಲಿ ಹಾಯಾಗಿ ಇರುವುದರ ಜೊತೆಗೆ ಹಕ್ಕಿಗಳ ಚಿಲಿಪಿಲಿ ಕೇಳುವುದು, ಪುಸ್ತಕ ಓದುವುದು, ಏಕಾಂತದಲ್ಲಿ ಸಂಗೀತ ಕೇಳುವುದು ಹಾಗೂ ಪ್ರಕೃತಿ ವೀಕ್ಷಣೆ ಮಾಡಬಹುದು ಎನ್ನುತ್ತಾರೆ ವಿವೇಕ್ ಆಳ್ವ.
ಈ ಗುಡಿಸಲಿನ ಸುತ್ತಲೂ ಬಿಸಿಲು ಮತ್ತು ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಕೂಡಾ ಹಾಕಿದ್ದಾರೆ.

Next Story





