ಸಮಸ್ತ ಕೋಶಾಧಿಕಾರಿ, ಹಿರಿಯ ವಿದ್ವಾಂಸ ಶೈಖುನಾ ಸ್ವಾದಿಕ್ ಮುಸ್ಲಿಯಾರ್ ನಿಧನ

ಮಂಗಳೂರು, ಎ.15: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ, ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ವಿದ್ವಾಂಸ ಶೈಖುನಾ ಸಿ.ಕೆ.ಎಂ. ಸ್ವಾದಿಕ್ ಮುಸ್ಲಿಯಾರ್ (79) ಇಂದು ರಾತ್ರಿ 8-45 ಕ್ಕೆ ಕೇರಳದ ಮನ್ನಾರ್ ಕಾಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹಿರಿಯ ವಿದ್ವಾಂಸರಾದ ಸ್ವಾದಿಕ್ ಮುಸ್ಲಿಯಾರ್ ಸಮಸ್ತದ ಧಾರ್ಮಿಕ, ಸಾಂಘಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇಂದು ಬೆಳಗ್ಗೆ ಅವರು ನೇತೃತ್ವ ನೀಡುವ ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಕೋವಿಡ್-19ನ ಲಾಕ್ ಡೌನ್ ನಿಂದಾಗಿ ಮದ್ರಸಗಳು ರಜೆಯಾಗಿ ಮನೆಯಲ್ಲಿ ಸುಮಾರು 1 ಲಕ್ಷದಷ್ಟಿರುವ ಮದ್ರಸ ಅಧ್ಯಾಪಕರಿಗೆ ಸಹಾಯ ಹಸ್ತ ಎಂಬ ನೆಲೆಯಲ್ಲಿ ಸಂಘಟನೆಯ ವತಿಯಿಂದ ತಲಾ 1 ಸಾವಿರ ರೂಪಾಯಿ ನೀಡಲಾಗುವುದೆಂದು ಅವರು ಘೋಷಿಸಿದ್ದು ಗಮನಾರ್ಹವಾಗಿದೆ.
ಉಸ್ತಾದ್ ರವರ ನಿಧನಕ್ಕೆ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಕರ್ನಾಟಕದ ಸಮಸ್ತದ ಅಧೀನದ ವಿವಿಧ ಸಂಘಟನೆಗಳ ನಾಯಕರಾದ ಎಸ್.ಬಿ.ದಾರಿಮಿ, ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ, ಕೆ.ಆರ್ ಹುಸೈನ್ ದಾರಿಮಿ, ಕೆ.ಎಲ್.ಉಮರ್ ದಾರಿಮಿ, ಕೆ.ಎಂ.ಎ.ಕೊಡುಂಗಾಯಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ರಫೀಕ್ ಹಾಜಿ ನೇರಳಕಟ್ಟೆ, ಕೆ.ಬಿ.ದಾರಿಮಿ, ರೆಂಜಾಡಿ ದಾರಿಮಿ, ಇಸ್ಮಾಯಿಲ್ ಯಮಾನಿ, ರಿಯಾಝುದ್ದೀನ್ ಹಾಜಿ ಮಂಗಳೂರು, ಅಬ್ದುಲ್ ರಹಿಮಾನ್ ಅಝಾದ್ ಉಮರ್ ದಾರಿಮಿ ಮುಫತ್ತಿಸ್ ಮೊದಲಾದ ಹಲವಾರು ಗಣ್ಯರು ಹಾಗೂ ಎಸ್.ವೈ.ಎಸ್. ದ.ಕ. ಜಿಲ್ಲಾ ಸಮಿತಿ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.







