ಮಂಗಳೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮಂಗಳೂರು, ಎ. 15: ನಗರದ ಪಡೀಲ್ ಜಲ್ಲಿಗುಡ್ಡೆಯ ಮಾನಲಕೋಡಿಯ ಪಾಳು ಗುಡ್ಡದಲ್ಲಿ ತೋಟದ ಬದಿ ಬುಧವಾರ ಅಪರಿಚಿತ ವ್ಯಕ್ತಿಯ ಶವವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶವದ ಚರ್ಮ ಸಂಪೂರ್ಣ ಕಿತ್ತು ಹೋಗಿದ್ದು, ಎಲುಬುಗಳು ಕಾಣಿಸುತ್ತಿವೆ. ಗುರುತು ಪತ್ತೆ ಹಚ್ಚಲಾರದ ಸ್ಥಿತಿಯಲ್ಲಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಆಗಿರ ಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





