ಎಂಆರ್ಪಿಎಲ್: ರೋಗಿಗಳಿಗೆ ಉಚಿತ ಔಷಧ ವ್ಯವಸ್ಥೆ
ಮಂಗಳೂರು, ಎ.15: ಎಂಆರ್ಪಿಎಲ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗಳಿಗೆ 1 ತಿಂಗಳ ಔಷಧಿಯನ್ನು ಜನೌಷಧಿ ಅಥವಾ ಅಗತ್ಯವಿದ್ದಲ್ಲಿ ಇತರ ಔಷಧಾಲಯಗಳಿಂದ (ಗರಿಷ್ಟ 1,000 ರೂ.ಗೆ ಮೀರದಂತೆ) ಉಚಿತವಾಗಿ ನೀಡಲು ಮುಂದೆ ಬಂದಿದೆ. ಅಗತ್ಯ ಇರುವವರು ಮೊ.ಸಂ: 9449615616/9480016714 ಸಂಪರ್ಕಿಸಬಹುದು.
ರೋಗಿಯ ಹೆಸರು, ವಯಸ್ಸು, ರೋಗದ ವಿವರ, ವಿಳಾಸ, ದೂರವಾಣಿ, ವೈದ್ಯರ ಸಲಹಾ ಚೀಟಿ, ಮೆಡಿಕಲ್ ರಶೀದಿ, ಬ್ಯಾಂಕ್ಪಾಸ್ ಪುಸ್ತಕದ ಮೊದಲಪುಟವನ್ನು ನೀಡಲು ತಿಳಿಸಲಾಗಿದೆ.
Next Story