ಕಲಬುರಗಿಯಲ್ಲಿ 18ಕ್ಕೆ ತಲುಪಿದ ಕೊರೋನ ಪೀಡಿತರ ಸಂಖ್ಯೆ

ಕಲಬುರಗಿ, ಎ.16: ನಿನ್ನೆ ಕವಲಗಾ ಗ್ರಾಮದ ಒಂದು ವರ್ಷದ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಈ ಮಗುವಿನ ಸಂಪರ್ಕಕ್ಕೆ ಬಂದಿದ್ದರೆನ್ನಲಾದ 23 ವರ್ಷದ ಮಹಿಳೆಯೊಬ್ಬರಿಗೂ ವೈರಸ್ ಸೋಂಕಗ ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಕೊರೋನ ಮಹಾಮಾರಿ ತಡೆಯಲು ಜಿಲ್ಲಾಡಳಿತ ನಗರದ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆದಿದ್ದು, ಸ್ಥಳೀಯ ರೋಗಿಗಳು ಬಂದು ಚಿಕತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ
ನಗರದಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ 18ಕ್ಕೆ ತಲುಪಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಾಹಿತಿಗಾಗಿ ಬಂದ ಸಿಬ್ಬಂದಿಗಳಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶರತ್ ಬಿ. ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Next Story





