ಪಡುಬಿದ್ರಿ: ಐದು ವರ್ಷದ ಮಗಳೊಂದಿಗೆ ಶಿಕ್ಷಕಿ ನಾಪತ್ತೆ
ಪಡುಬಿದ್ರಿ: ಐದು ವರ್ಷದ ತನ್ನ ಪುತ್ರಿಯೊಂದಿಗೆ ಶಿಕ್ಷಕಿಯೋರ್ವಳು ನಾಪತ್ತೆಯಾದ ಬಗ್ಗೆ ಪಡುಬಿದ್ರಿಯಲ್ಲಿ ಪ್ರಕರಣ ದಾಖಲಾಗಿದೆ.
ಕುತ್ಯಾರಿನ ಶಾಲೆಯೊಂದರ ಶಿಕ್ಷಕಿ ಕಾವ್ಯಾ ಪೈ ಶೇಟ್(30) ಹಾಗೂ ಐದು ವರ್ಷದ ಪುತ್ರಿ ನಾಪಪತ್ತೆಯಾಗಿದ್ದಾರೆ. ಕಾವ್ಯಾ ಎಂಬಾಕೆ ಹೊನ್ನಾವರದ ಹಳದಿಪುರದ ಮಂಜುನಾಥ್ ಶೇಟ್ ಎಂಬವರನ್ನು 7 ವರ್ಷಗಳ ಹಿಂದೆ ಮದುವೆಯಾಗಿದ್ದರು.
ಲಾಕ್‍ಡೌನ್‍ನಿಂದ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದವರು ಎಪ್ರಿಲ್ 14ರಂದು ಬೆಳಿಗ್ಗೆ 8ಗಂಟೆಗೆ ಸಂತೆಕಟ್ಟೆಯಲ್ಲಿರುವ ಗಂಡನ ಅಕ್ಕಮ ಮನೆಗೆ ತೆರಳುವುದಾಗಿ ಪುತ್ರಿಯೊಂದಿಗೆ ಹೊರಟಿದ್ದರು. ಆದರೆ ಆ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





