ತುಂಬೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ: ಕ್ವಾರಂಟೈನ್ ನಲ್ಲಿದ್ದ 3 ಮಕ್ಕಳ ಸಹಿತ ಐವರು ಆಸ್ಪತ್ರೆಯಿಂದ ಬಿಡುಗಡೆ

ಸಾಂದರ್ಭಿಕ ಚಿತ್ರ
ಬಂಟ್ವಾಳ, ಎ.16: ತಾಲೂಕಿನ ತುಂಬೆ ಗ್ರಾಮದಲ್ಲಿ ಕೋವಿಡ್ - 19 (ಕೊರೋನ) ಪಾಸಿಟಿವ್ ಆದ ವ್ಯಕ್ತಿಯ ಪತ್ನಿ, ಮೂವರು ಮಕ್ಕಳು ಸಹಿತ ಏಳು ಮಂದಿ ಕ್ವಾರಂಟೈನ್ ನಲ್ಲಿದ್ದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ವೈಯಕ್ತಿಕ ಕೆಲಸಕ್ಕೆಂದು ದೆಹಲಿಗೆ ತೆರಳಿ ಮಾರ್ಚ್ 22ರಂದು ತುಂಬೆಗೆ ಮರಳಿದ್ದ ಇಲ್ಲಿನ ವ್ಯಕ್ತಿಯೊಬ್ಬರಿಗೆ ಎಪ್ರಿಲ್ 4ರಂದು ಕೊರೋನ ದೃಢಪಟ್ಟ ವರದಿ ಬಂದಿತ್ತು. ಆ ಬಳಿಕ ಅವರ ಪತ್ನಿ, ಮೂವರು ಮಕ್ಕಳನ್ನು ಮಂಗಳೂರಿನ ಆಸ್ಪತ್ರೆಯೊಂದಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
ಕೆಲವು ದಿನಗಳ ಕೊರೋನ ಪಾಸಿಟಿವ್ ಆದ ವ್ಯಕ್ತಿಯ ಸಂಪರ್ಕ ಮಾಡಿದ್ದ ಮೂವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಈ ಏಳು ಮಂದಿಯ ಗಂಟಲ ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗೊತ್ತು. ವರದಿಯಲ್ಲಿ ಕೊರೋನ ನೆಗೆಟಿವ್ ಬಂದಿದ್ದು ಈ ಹಿನ್ನೆಲೆಯಲ್ಲಿ ಗುರುವಾರ ಏಳು ಮಂದಿಯನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಎಪ್ರಿಲ್ 30ರ ವರೆಗೆ ಮನೆಯಲ್ಲೇ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.
Next Story