ಜಾನುವಾರು ಮಾಂಸ ಸಾಗಾಟ: ಓರ್ವನ ಬಂಧನ
ಶಿರ್ವ, ಎ.16: ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಓರ್ವನನ್ನು ಶಿರ್ವ ಪೊಲೀಸರು ಎ.16ರಂದು ಬೆಳಗ್ಗೆ ಕಳತ್ತೂರು ಗ್ರಾಮದ ಚಂದ್ರನಗರ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಕಟಪಾಡಿ ಅಚ್ಚಡ ಕ್ರಾಸ್‌ನ ಇಮ್ರಾನ್(34) ಬಂಧಿತ ಆರೋಪಿ. ಇವರಲ್ಲಿ ರಹೀಂ ಎಂಬಾತ ಪರಾರಿಯಾಗಿದ್ದಾನೆ. ಬಂಧಿತನಿಂದ ರಿಕ್ಷಾ ಹಾಗೂ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಇಮ್ರಾನ್‌ಗೆ ಉಡುಪಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಆರೋಪಿ ಪರ ನ್ಯಾಯವಾದಿ ಅಸದುಲ್ಲಾ ವಾದಿಸಿದ್ದರು.
Next Story





