ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ರಂಜನ್ ಕುಮಾರ್ ಆಯ್ಕೆ
ಮಂಗಳೂರು, ಎ.16: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ. ಅದರಂತೆ ಗುರುವಾರದ ‘ವಾರಿಯರ್ ಆಫ್ ದಿ ಡೇ’ ಆಗಿ ಮಂಗಳೂರು ಗ್ರಾಮಾಂತರ ಠಾಣೆಯ ಎಎಸ್ಸೈ ರಂಜನ್ ಕುಮಾರ್ ಆಯ್ಕೆಯಾಗಿದ್ದಾರೆ.
ವಿದೇಶಗಳಿಂದ ಬಂದಿರುವವರನ್ನು ವಿಶೇಷ ನಿಗಾವಹಿಸಿ ಹೋಮ್ ಕ್ವಾರಂಟೈನ್ ಮಾಡುವ ಪ್ರಮುಖ ಜವಬ್ದಾರಿಯನ್ನು ರಂಜನ್ ಕುಮಾರ್ ವಹಿಸಿಕೊಂಡಿದ್ದಾರೆ. ಆಶಾ ಕಾರ್ಯಕರ್ತರೊಂದಿಗೆ ಉತ್ತಮವಾದ ಸಂವಹನವನ್ನು ಸಾಧಿಸಿ ಹೋಮ್ ಕ್ವಾರಂಟೈನ್ ಆಗಿರುವವರನ್ನು ಮನೆಯಿಂದ ಹೊರ ಬಾರದಂತೆ ಸೂಚನೆಗಳನ್ನು ನೀಡಿ, ಅವರಿಗೆ ದೈನಂದಿನ ಅಗತ್ಯ ಸಾಮಗ್ರಿಗಳು ತಲುಪಿಸುವಲ್ಲಿ ಉತ್ತಮ ಕಾರ್ಯನಿವರ್ಹಿಸಿ ಹೋಮ್ ಕ್ವಾರಂಟೈನಲ್ಲಿರುವವರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story





