ಕಲಬುರಗಿ: ಲಾಕ್‌ಡೌನ್ ಉಲ್ಲಂಘಿಸಿ ಜಾತ್ರೆ; ಪಿಎಸ್‌ಐ, ಸಿಡಿಪಿಒ ಅಮಾನತು

ಕಲಬುರಗಿ, ಎ.16: ರಾವೂರ್ ಗ್ರಾಮದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಮಧ್ಯೆಯೂ ಜಾತ್ರೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಹಾಗೂ ಸಿಡಿಪಿಒ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಬಾವಗಿ ಹಾಗೂ ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಆದ ಚಿತ್ತಾಪೂರ ಸಿಡಿಪಿಒ ರಾಜಕುಮಾರ ರಾಠೋಡ್ ಅಮಾನತು ಆದವರು.
ಪಿಎಸ್‌ಐ ವಿಜಯಕುಮಾರ ಬಾವಗಿ ಅವರನ್ನು ಎಸ್ಪಿ ಯಡಾ ಮಾರ್ಟಿನ್ ಹಾಗೂ ಸಿಡಿಪಿಒ ರಾಜಕುಮಾರ ರಾಠೋಡ್ ಅವರನ್ನು ಜಿಲ್ಲಾಧಿಕಾರಿ ಶರತ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಸಿಡಿಪಿಒ ಆಡಳಿತ ವೈಫಲ್ಯ ಹಾಗೂ ಪಿಎಸ್‌ಐ ಅವರನ್ನು ಭದ್ರತಾ ಲೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
Next Story





