ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 32ಕ್ಕೆ ಇಳಿಕೆ

ಬೆಂಗಳೂರು, ಎ.16: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದ 36 ವಾರ್ಡ್ ಪೈಕಿ 4 ವಾರ್ಡ್‍ಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕಳೆದ 28 ದಿನಗಳಿಂದ ಹೊಸ ಸೋಂಕಿತರು ಪತ್ತೆಯಾಗದ್ದರಿಂದ 4 ವಾರ್ಡ್‍ಗಳನ್ನು ಪಟ್ಟಿಯಿಂದ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಸತತವಾಗಿ 28 ದಿನಗಳವರೆಗೆ ಕೊರೋನ ವೈರಸ್ ಸೋಂಕಿತರು ಪತ್ತೆ ಆಗದಿದ್ದಲ್ಲಿ ಅಂತಹ ಪ್ರದೇಶಗಳನ್ನು ಕೊರೋನ ವೈರಸ್ ಹಾಟ್‍ಸ್ಪಾಟ್ ಪಟ್ಟಿಯಿಂದ ಕೈಬಿಡಲಾಗುತ್ತದೆ. ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
7 ವಲಯಗಳ 32 ಹಾಟ್‍ಸ್ಪಾಟ್ ವಾರ್ಡ್‍ಗಳ ವಿವರ:
ಬೊಮ್ಮನಹಳ್ಳಿ ವಲಯದಲ್ಲಿ ವಾರ್ಡ್ ನಂ-191 ಸಿಂಗಸಂದ್ರ ಮಾತ್ರ ಹಾಟ್ ಸ್ಪಾಟ್ ಕೇಂದ್ರವಾಗಿದೆ. ಮಹದೇವಪುರ ವಲಯದಲ್ಲಿ ಒಟ್ಟು 5 ವಾರ್ಡ್‍ಗಳು ಹಾಟ್ ಸ್ಪಾಟ್ ಆಗಿವೆ.
ಹಗದೂರು-ವಾರ್ಡ್ 84, ಗರುಡಾಚಾರ್ ಪಾಳ್ಯ-82, ವರ್ತೂರು-149, ಹೂಡಿ-54, ಹೊರಮಾವು-25ರಲ್ಲಿ ಹೆಚ್ಚು ಪಾಸಿಟಿವ್ ಕೇಸ್‍ಗಳಿವೆ.
ಬೆಂಗಳೂರು ಪೂರ್ವ ವಲಯದಲ್ಲಿ 9 ವಾರ್ಡ್‍ಗಳು ಹಾಟ್ ಸ್ಪಾಟ್ ಲಿಸ್ಟ್ ನಲ್ಲಿವೆ. ವಸಂತ ನಗರ-93, ಲಿಂಗರಾಜಪುರ-49, ಜೀವನ್ ಭೀಮಾನಗರ-88, ರಾಧಾಕೃಷ್ಣ ಟೆಂಪಲ್ -18, ಸಿ.ವಿ ರಾಮನ್ ನಗರ-57, ರಾಮಸ್ವಾಮಿ ಪಾಳ್ಯ-57, ಮಾರುತಿ ಸೇವಾನಗರ-59, ದೊಮ್ಮಲೂರು-112, ಸಂಪಂಗಿ ರಾಮನಗರ-110 ಹಾಟ್‍ಸ್ಪಾಟ್ ಕೇಂದ್ರಗಳಾಗಿವೆ.
ಬೆಂಗಳೂರು ದಕ್ಷಿಣ ವಲಯದಲ್ಲಿ 9 ವಾರ್ಡ್‍ಗಳು ಹಾಟ್ ಸ್ಪಾಟ್ ಆಗಿದ್ದು, ಸುಧಾಮನಗರ-118, ಕರೀಂಸಂದ್ರ-166, ಈಜಿಪುರ-148, ಗುರಪ್ಪನ ಪಾಳ್ಯ-171, ಅತ್ತಿಗುಪ್ಪೆ-132, ಶಾಕಾಂಬರಿನಗರ-179, ಜೆಪಿನಗರ- 177, ಬಾಪೂಜಿನಗರ -134, ಹೊಸಗಳ್ಳಿ-124
ಬೆಂಗಳೂರು ಪಶ್ಚಿಮ ವಲಯದಲ್ಲಿ 5 ಹಾಟ್‍ಸ್ಪಾಟ್‍ಗಳಿವೆ. ನಾಗಪುರ-67, ಸುಭಾಷ್ ನಗರ-95, ಶಿವನಗರ-107, ಪಾದರಾಯನಪುರ-135, ಕೆ.ಆರ್ ಮಾರ್ಕೆಟ್-139.
ಯಲಹಂಕ ವಲಯದಲ್ಲಿ 2 ವಾರ್ಡ್ ಹಾಟ್‍ಸ್ಪಾಟ್ ಲಿಸ್ಟ್‍ನಲ್ಲಿವೆ. ಥಣಿಸಂದ್ರ-6, ಬ್ಯಾಟರಾಯನಪುರ-7 ಹಾಟ್‍ಸ್ಪಾಟ್ ಸೆಂಟರ್ ಆಗಿವೆ. ಆರ್‍ಆರ್ ನಗರ ವಲಯದ ವಾರ್ಡ್ ನಂ. 160 ಆರ್‍ಆರ್ ನಗರ ವಾರ್ಡ್‍ನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ.







