ಲಾಕ್ ಡೌನ್: ಎಪ್ರಿಲ್ 20ರ ನಂತರ ಈ ಸೇವೆಗಳು ಜನರಿಗೆ ಲಭ್ಯ

ಹೊಸದಿಲ್ಲಿ: ಎರಡನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ಕೊರೋನ ವೈರಸ್ ನಿಂದ ಕನಿಷ್ಠ ಬಾಧಿತ ಪ್ರದೇಶಗಳಲ್ಲಿ ಎಪ್ರಿಲ್ 20ರ ನಂತರ ಕಾರ್ಯಾಚರಿಸಬಹುದಾದ ಕ್ಷೇತ್ರಗಳ ಪಟ್ಟಿಗೆ ಇನ್ನೂ ಕೆಲವು ಸೇರ್ಪಡೆಗಳನ್ನು ಕೇಂದ್ರ ಸರಕಾರ ಮಾಡಿದೆ.
ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿ ಕಾರ್ಯಾರಂಭಿಸಲು ಅನುಮತಿಸಲಾಗುವುದು, ಜತೆಗೆ ತೆಂಗು, ಅಡಿಕೆ ಹಾಗೂ ಕೊಕ್ಕೋ ಪ್ಲಾಂಟೇಶನ್, ಬುಡಕಟ್ಟು ಜನಾಂಗಗಳ ಅರಣ್ಯ ಉತ್ಪನ್ನ ಉತ್ಪಾದನೆ ಕಾರ್ಯಗಳನ್ನೂಆರಂಭಿಸಬಹುದು ಎಂದು ಕೇಂದ್ರ ಹೇಳಿದೆ.
ಗ್ರಾಮೀಣ ಭಾಗಗಳಲ್ಲಿ ನೀರು ಪೂರೈಕೆ, ನೈರ್ಮಲ್ಯ ಸಂಬಂಧಿ ಕಾಮಗಾರಿಗಳು, ವಿದ್ಯುತ್ ತಂತಿಗಳ, ಟೆಲಿಕಾಂ ಆಪ್ಟಿಕಲ್ ಫೈಬರ್ ಹಾಗೂ ಕೇಬಲುಗಳ ಅಳವಡಿಕೆಗೆ ಅನುಮತಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇ-ಕಾಮರ್ಸ್ ಸಂಸ್ಥೆಗಳಾದ ಅಮೆಝಾನ್, ಫ್ಲಿಪ್‍ಕಾರ್ಟ್ ಹಾಗೂ ಸ್ನ್ಯಾಪ್ ಡೀಲ್ ಮೂಲಕ ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್‍ಟಾಪ್, ಬಟ್ಟೆಗಳು ಹಾಗೂ ಶಾಲಾ ಮಕ್ಕಳಿಗೆ ಅಗತ್ಯವಾದ ಸ್ಟೇಷನರಿ ಐಟಂಗಳನ್ನು ಹಾಗೂ ದಿನಸಿ ಸಾಮಗ್ರಿ, ಔಷಧಿಗಳನ್ನೂ ಮಾರಾಟ ಮಾಡಬಹುದೆಂದು ಕೇಂದ್ರ ಹೇಳಿದೆ.







