ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್: 1 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿ ವಿತರಣೆ

ಮಂಗಳೂರು : ಸಮಾಜಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುವ ಮಂಗಳೂರಿನ ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ಪರಿಸರದ 250 ಮನೆಗಳಿಗೆ ಅಕ್ಕಿ ವಿತರಿಸಿತು.
ಅಸೋಸಿಯೇಶನ್ ಅಧ್ಯಕ್ಷ ಲವೀನ್ ಪೂಜಾರಿ ಈ ಸಂದರ್ಭ ಮಾತನಾಡಿ, ವಿವಿಧ ಹಂತಗಳಲ್ಲಿ ಈ ಪ್ರದೇಶದ ಮನೆಗಳಿಗೆ ದಿನ ಬಳಕೆಯ ವಸ್ತುಗಳನ್ನು ವಿತರಿಸಿರುವ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಸದಾ ಜನರ ಬದುಕಿನ ಬಗ್ಗೆ ಚಿಂತಿಸುವ ಸಂಘಟನೆಯಾಗಿದೆ ಎಂದರು.
ಶಿಕ್ಷಣ, ಆರೋಗ್ಯ, ಸಂಘಟನೆ, ಅಭಿವೃದ್ಧಿಯ ಮೂಲ ಉದ್ದೇಶಗಳೊಂದಿಗೆ ಅಸೋಸಿಯೇಶನ್ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ಜನರ ಬದುಕಿನ ಜೊತೆ ಇರಲಿದೆ ಎಂದರು.
ಅಸೋಸಿಯೇಷನ್ ತನ್ನ ಸ್ವಂತ ಹಣದ ಆಹಾರ ಸಾಮಗ್ರಿ ವಿತರಿಸುವ ಜತೆಗೆ ವಿವಿಧ ಹಂತಗಳಲ್ಲಿ ಸ್ಥಳೀಯ ದಾನಿಗಳಿಂದ ಈಗಾಗಲೇ ದಿನ ಬಳಕೆಯ ಕಿಟ್‌ಗಳನ್ನು ವಿತರಿಸುತ್ತಿದೆ ಎಂದು ಹೇಳಿದರು.
Next Story





