ದಲಿತ ನೌಕರ ಆತ್ಮಹತ್ಯೆ ಪ್ರಕರಣ: ಕ್ರಮಕ್ಕೆ ದಸಂಸ ಆಗ್ರಹ
ಕಾರ್ಕಳ, ಎ.17: ಗ್ರಾಪಂ ದಲಿತ ನೌಕರ, ಬಿಲ್ ಕಲೆಕ್ಟರ್ ಶ್ಯಾಮ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಗ್ರಾಪಂನಲ್ಲಿನ ಮಾನಸಿಕ ಕಿರುಕುಳವೇ ಕಾರಣ ಎಂದು ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.
ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನಂತೆ ಕೇಸು ದಾಖಲಿಸಿ ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಆದಷ್ಟು ಬೇಗ ಮೃತರ ಪತ್ನಿಗೆ ಅನುಕಂಪದ ನೆಲೆಯಲ್ಲಿ ಉದ್ಯೋಗ ಕೊಡಬೇಕು ಎಂದು ದಸಂಸ ಒತ್ತಾಯಿಸಿದೆ.
ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸದಿದ್ದರೆ ಅದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಭಾಸ್ಕರ್ ಮಾಸ್ಟರ್, ಪರಮೇಶ್ವರ ಉಪ್ಪೂರು, ಪ್ರವೀಣ್, ಶ್ಯಾಮ ಸುಂದರ್ ತೆಕ್ಕಟ್ಟೆ, ಮಂಜುನಾಥ ಬಾಳ್ಕದ್ರು ತಾಲೂಕು ಸಂಚಾಲಕ ಶಂಕರ್‌ದಾಸ್ ಚೆಂಡ್ಕಳ, ರಾಘವ ಕುಕುಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





