ಮಾರಿಪಳ್ಳ ಮಸೀದಿ, ಎಸ್ಕೆಎಸ್ಸೆಸ್ಸೆಫ್ ಯುನಿಟ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ
ಬಂಟ್ವಾಳ, ಎ.17: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪುದು ಗ್ರಾಮದ ಮಾರಿಪಳ್ಳ ಬದ್ರೀಯ್ಯಿನ್ ಜುಮಾ ಮಸೀದಿ ಮತ್ತು ಎಸ್ಕೆಎಸ್ಸೆಸ್ಸೆಫ್ ಮಾರಿಪಳ್ಳ ಯುನಿಟ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಮಾರಿಪಳ್ಳ ಮತ್ತು ಮಲ್ಲಿ ಹೈದ್ರೋಶಿಯಾ ಜುಮಾ ಮಸೀದಿ ಜಮಾತಿಗೆ ಒಳಪಟ್ಟ ಸರ್ವ ಧರ್ಮಗಳ 650 ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಬದ್ರೀಯ್ಯಿನ್ ಜುಮಾ ಮಸೀದಿ ಮಾರಿಪಳ್ಳ ಇದರ ಆಡಳಿತ ಸದಸ್ಯರು ಎಸ್ಕೆಎಸ್ಸೆಸ್ಸೆಫ್ ಮಾರಿಪಳ್ಳ ಯುನಿಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





