ಕ್ರೀಡಾಂಗಣದ ಒಳಾಂಗಣ ಗೋಡೆ ಕುಸಿದು ಯುವಕ ಮೃತ್ಯು

ಕಲಬುರಗಿ, ಎ.17: ನಿರ್ಮಾಣ ಹಂತದಲ್ಲಿದ್ದ ಒಳಾಂಗಣದ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಜೇವರ್ಗಿ ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಇಂದು ನಡೆದಿದೆ.
ಮೃತ ಕಾರ್ಮಿಕನನ್ನು ಯಲ್ಲಪ್ಪ (25) ಎಂದು ಗುರುತಿಸಲಾಗಿದೆ.
ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಒಳಾಂಗಣದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಗೋಡಿ ಕುಸಿದು ಈ ಅವಘಡ ಸಂಭವಿಸಿದೆ. ಗೋಡೆ ಕುಸಿದ ಶಬ್ದ ಕೇಳುತ್ತಿದ್ದಂತೆಯೇ ಮತ್ತೊಂದು ಭಾಗದಲ್ಲಿದ್ದ ಏಳು ಮಂದಿ ಕಟ್ಟಡ ಕಾರ್ಮಿಕರು ಹೊರಓಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story





