ಬೈಕ್ ನಲ್ಲಿ 430 ಕಿ.ಮೀ. ಕ್ರಮಿಸಿ ಕ್ಯಾನ್ಸರ್ ರೋಗಿಗೆ ಔಷಧ ತಲುಪಿಸಿದ ಕರ್ನಾಟಕದ ಪೊಲೀಸ್ ಪೇದೆ
ಲಾಕ್ ಡೌನ್ ನಡುವೆ ಮಾನವೀಯ ಸೇವೆ

ಬೆಂಗಳೂರು: ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧವನ್ನು ತಲುಪಿಸಲು ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು 430 ಕಿ.ಮೀ. ಕ್ರಮಿಸಿದ್ದು, ಪೊಲೀಸ್ ಕಾನ್ ಸ್ಟೇಬ್ ಕುಮಾರಸ್ವಾಮಿಯವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕ್ಯಾನ್ಸರ್ ರೋಗಿಗೆ ಔಷಧವನ್ನು ತಲುಪಿಸಲು ಕುಮಾರಸ್ವಾಮಿಯವರು ಬೆಂಗಳೂರಿನಿಂದ ಧಾರವಾಡಕ್ಕೆ ಸುಮಾರು 430 ಕಿ.ಮೀ. ದೂರ ಕ್ರಮಿಸಿದ್ದರು. ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವೀಟ್ ಮಾಡಿದ್ದು, ಕುಮಾರಸ್ವಾಮಿಯವರ ಮಾನವೀಯ ಸೇವೆಯನ್ನು ಪ್ರಶಂಸಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕುಮಾರಸ್ವಾಮಿಯವರನ್ನು ಅಭಿನಂದಿಸಿದ್ದಾರೆ.
Kudos to Shri. S. Kumaraswamy, Head Constable who travelled solo on bike from Bengaluru to Dharawad traversing 430 kms to provide life saving medication for a cancer patient.@CPBlr appreciated his good deed. pic.twitter.com/BSJm6caRie
— BengaluruCityPolice (@BlrCityPolice) April 16, 2020
Next Story







