ಕೋವಿಡ್-19ಗೆ ಔಷಧ ಸಿದ್ಧ?
ಪ್ರಾಯೋಗಿಕ ಪರೀಕ್ಷೆಗಳಲ್ಲಿ ಆಶಾದಾಯಕ ಫಲಿತಾಂಶ

ವಾಶಿಂಗ್ಟನ್, ಎ. 17: ಅಮೆರಿಕದ ಔಷಧ ತಯಾರಿಕಾ ಕಂಪೆನಿ ಗಿಲೀಡ್ ಸಯನ್ಸಸ್ ಇಂಕ್‌ನ ಪ್ರಾಯೋಗಿಕ ಔಷಧ ‘ರೆಮ್‌ಡೆಸಿವಿರ್’ ಕೋವಿಡ್-19 ರೋಗಿಗಳಲ್ಲಿ ಆಶಾದಾಯಕ ಪರಿಣಾಮಗಳನ್ನು ಬೀರುತ್ತಿದೆ ಎಂಬುದಾಗಿ ವೈದ್ಯಕೀಯ ಸುದ್ದಿ ವೆಬ್‌ಸೈಟ್ ‘ಸ್ಟಾಟ್’ ವರದಿ ಮಾಡಿದೆ.
ಈ ವರದಿಯ ಬೆನ್ನಿಗೇ ಗುರುವಾರದ ವ್ಯವಹಾರದಲ್ಲಿ ಕಂಪೆನಿಯ ಶೇರುಗಳ ಮೌಲ್ಯ 16 ಶೇಕಡದಷ್ಟು ಹೆಚ್ಚಿದೆ.
ಈ ಔಷಧವನ್ನು ಬಳಸಿದ ಕೋವಿಡ್-19 ರೋಗಿಗಳು ಜ್ವರ ಮತ್ತು ಉಸಿರಾಟದ ಲಕ್ಷಣಗಳಿಂದ ಕ್ಷಿಪ್ರ ಚೇತರಿಕೆ ಕಂಡಿದ್ದಾರೆ ಹಾಗೂ ಬಹುತೇಕ ಎಲ್ಲ ರೋಗಿಗಳನ್ನು ಒಂದು ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಈ ಅಧ್ಯಯನದಲ್ಲಿ ಭಾಗವಹಿಸುತ್ತಿರುವ ಶಿಕಾಗೊ ವಿಶ್ವವಿದ್ಯಾನಿಲಯ ಆಸ್ಪತ್ರೆಯು ಹೇಳಿದೆ ಎಂದು ‘ಸ್ಟಾಟ್’ ತಿಳಿಸಿದೆ.
‘‘ಪ್ರಾಯೋಗಿಕ ಪರೀಕ್ಷೆಗಳಿಂದ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಸಮಗ್ರ ಅಂಕಿಅಂಶಗಳ ವಿಶ್ಲೇಷಣೆ ನಡೆಯಬೇಕಾಗಿದೆ’’ ಎಂದು ಇಮೇಲ್ ಹೇಳಿಕೆಯೊಂದರಲ್ಲಿ ಔಷಧ ತಯಾರಿಕಾ ಕಂಪೆನಿ ಹೇಳಿದೆ.
Next Story





