Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಾನತೆಯ ಸಮಾಜಕ್ಕೆ ಕೊರೋನ ವೈರಸ್...

ಸಮಾನತೆಯ ಸಮಾಜಕ್ಕೆ ಕೊರೋನ ವೈರಸ್ ಮುನ್ನುಡಿ

ಡಾ. ಎಂ.ವೇದಾಂತ ಏಳಂಜಿಡಾ. ಎಂ.ವೇದಾಂತ ಏಳಂಜಿ17 April 2020 10:58 PM IST
share

ಕೊರೋನ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುವ ಸಂದರ್ಭದಲ್ಲಿ ಭಾರತದ ವೈರಸ್‌ನ ಸೋಂಕಿತರ ಸಂಖ್ಯೆ ವಿಶ್ವಸಂಸ್ಥೆಗೆ ಹೆಚ್ಚು ಚಿಂತಿಸುವಂತೆ ಮಾಡಿದೆ. ಶಂಕಿತ, ಸೋಂಕಿತರನ್ನು ಪರೀಕ್ಷಿಸುವುದರಿಂದ ವೈರಸ್ ತಡೆಗಟ್ಟಲು ಆಗುವುದಿಲ್ಲ. ದೇಶವ್ಯಾಪಿ ಜನರನ್ನು ಪರೀಕ್ಷೆ ಮಾಡಿದಾಗ ನಿಯಂತ್ರಣ ಮಾಡಬಹುದೆಂಬ ಅಭಿಪ್ರಾಯ ತಾಳಿದೆ. ಇದರ ನಡುವೆ ದೇಶ ವಿದೇಶದ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ವೈದ್ಯಕೀಯ ಸಲಕರಣೆಗಳ ಬಗ್ಗೆ ಪರವಿರೋಧಗಳು ಕೇಳಿಬರುತ್ತಿವೆ. ಭಾರತದ ಜನಸಂಖ್ಯೆ ಮತ್ತು ಕೊರೋನ ಸೋಂಕಿತರ ಲೆಕ್ಕಚಾರಗಳನ್ನು ಗಮನಿಸಿದ ವಿಶ್ವಸಂಸ್ಥೆ ಭಾರತೀಯ ವೈದ್ಯಕೀಯ ಸವಲತ್ತಿನ ಬಗ್ಗೆ ಅನುಮಾನಿಸಿದೆ. ಇದರ ನಡುವೆ ಸಾಮಾಜಿಕ ಅಂತರ ಎಂಬ ಪದದ ಬದಲಾಗಿ ದೈಹಿಕ ಅಂತರ ಪದ ಬಳಕೆಯಾಗಬೇಕೆಂಬ ಬಗ್ಗೆಯೂ ಚರ್ಚೆಗಳು ಶುರುವಾಗಿವೆ. ಕೊರೋನ ವೈರಸ್ ಹರಡುವಿಕೆ ಬಗ್ಗೆೆ ಅನೇಕರ ಅನೇಕ ರೀತಿಯ ವಿಶ್ಲೇಷಣಾತ್ಮಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಆದರೆ ಮೂಲ ಭಾರತ ಎಂತಹದ್ದು? ಭಾರತದಲ್ಲಿನ ಮನುಷ್ಯ ಸಂಬಂಧಗಳು ಹೇಗಿವೆ? ಹಿಂದಿನ ಮತ್ತು ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಅರಿಯುವುದು ಮುಖ್ಯವೆನಿಸುತ್ತದೆ. ಚೀನಾ, ಇಟಲಿ, ಅಮೆರಿಕ, ಫ್ರಾನ್ಸ್, ಲಂಡನ್ ಮುಂತಾದ ದೇಶಗಳಲ್ಲಿ ಹಬ್ಬುವಂತಹ ವೇಗ ಭಾರತದಲ್ಲಿ ಇಲ್ಲದಿರುವುದು ನೆಮ್ಮದಿ ತಂದಿದೆ. ಆದರೆ ಜೈವಿಕ, ವೈದ್ಯಕೀಯ, ಹವಾಮಾನ ಮುಂತಾದ ಕಾರಣಗಳನ್ನು ಹುಡುಕುವ ಜೊತೆಗೆ ಭಾರತದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಒಳಹೊಕ್ಕು ನೋಡಬೇಕಿದೆ. ಆ ಮೂಲಕ ಕೊರೋನ ವೈರಸ್ ಹರಡದೇ ಇರುವುದಕ್ಕೆ ಮೂಲ ಕಾರಣಗಳು ತಿಳಿಯುತ್ತವೆ ಮತ್ತು ಭಾರತ ವಿಶ್ವಗುರುವೆಂಬ ಕಣ್ಕಟ್ಟು ಆಟಗಳ ಪೊರೆಗಳು ಕಳಚಿಬೀಳುತ್ತವೆ.

ವಿದೇಶಗಳಲ್ಲಿಲ್ಲದ ಜಾತಿ ಅಸಮಾನತೆ, ವೃತ್ತಿ ಅಸಮಾನತೆ, ಆರ್ಥಿಕ ಅಸಮಾನತೆ, ಅಂತಸ್ತಿನ ಅಸಮಾನತೆ, ಶ್ರೇಷ್ಠತೆಯ ವ್ಯಸನಗಳು ಭಾರತದಲ್ಲಿ ಆಳವಾಗಿ ನೆಲೆಯೂರಿವೆ. ಈ ಅಸಮಾನತೆಗಳು ಆಧುನಿಕ ಕಾಲಕ್ಕೆ ಭಿನ್ನ ಸ್ವರೂಪಗಳನ್ನು ಪಡೆದಿವೆ. ಇಲ್ಲಿ ಮೇಲು ಕೀಳೆಂಬುದು ದೇಶವ್ಯಾಪಿ ಹರಡಿದೆ. ‘ಎ’ ದರ್ಜೆಯ ಉದ್ಯೋಗದಲ್ಲಿರುವವರು ‘ಬಿ’ ದರ್ಜೆಯ ಉದ್ಯೋಗಸ್ಥರ ನಡುವೆ ಅಂತರ ಕಾಯ್ದುಕೊಂಡರೆ, ಬಿ ದರ್ಜೆಯವರು ‘ಸಿ’ ದರ್ಜೆಯವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಉದ್ಯೋಗಿಗಳು ನಿರುದ್ಯೋಗಿಗಳ ಜೊತೆ ಅಂತರ ಕಾಯ್ದುಕೊಳ್ಳುತ್ತಾರೆ. ಇವರೆಲ್ಲರೂ ರೈತಾಪಿ ವರ್ಗದ ಜನರನ್ನು, ಕೂಲಿಕಾರ್ಮಿಕರನ್ನು, ಬಡತನದಲ್ಲಿರುವವರನ್ನು ಅಘೋಷಿತವಾಗಿ ದೂರ ಇಡಲು ಬಯಸುತ್ತಾರೆ. ಮೇಲ್ಜಾತಿಗಳಲ್ಲಿಯೇ ಆಗಲಿ, ತಳಸಮುದಾಯಗಳಲ್ಲಿಯೇ ಆಗಲಿ ವೃತ್ತಿಗಳಲ್ಲಿ, ಅಂತಸ್ತುಗಳು ಹೆಚ್ಚಾದಂತೆ ತಮಗಿಂತಲೂ ಕೆಳಗಿನವರನ್ನು ದೂರ ಸರಿಸುತ್ತಾರೆ. ಇನ್ನು ಜಿಲ್ಲಾ ಕೇಂದ್ರಗಳಲ್ಲಿ ವಾಸ ಮಾಡುವವರು ಶೇ. 80 ಹಳ್ಳಿಗಳ ಸಂಪರ್ಕವನ್ನು ಕಡಿತಗೊಳಿಸಿಕೊಂಡಿರುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ಜನರು ತಮ್ಮ ಪಕ್ಕದ ಮನೆಯವರ ಪರಿಚಯವೇ ಇಲ್ಲದಂತೆ ವಾಸಿಸುತ್ತಾರೆ. ಬಸ್, ಸಿನೆಮಾ, ಹೊಟೇಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲೂ ಅಂತಸ್ತಿಗೆ ತಕ್ಕಹಾಗೆ ವರ್ಗೀಕೃತಗೊಂಡಿವೆ. ಮಧ್ಯಮ ತರಗತಿಯವರಿಗೆ ಬಸ್, ಹೊಟೇಲ್, ಸಿನೆಮಾ ಥಿಯೇಟರ್‌ಗಳೇ ಬೇರೆಯಾದರೆ, ಮಾಲ್, ಐಮ್ಯಾಕ್ಸ್, ಪಂಚತಾರ ಹೊಟೇಲ್‌ಗಳು ಕೆಲವರ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲೂ ಸಹ ಬಹುತೇಕವಾಗಿ ಎರಡು ಮೂರು ವಿಭಾಗಗಳಾಗಿ ವರ್ಗೀಕರಿಸುತ್ತವೆ. ಭಾರತದ ಮಾರುಕಟ್ಟೆಗಳು ಸಹ ಈ ವಿಭಾಗಕ್ರಮವನ್ನು ಮೊದಲಿನಿಂದಲೂ ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬಂದಿದೆ.

ಇನ್ನು ಕೊರೋನ ವಿಚಾರಕ್ಕೆ ಬಂದರೆ, ಚೀನಾ ಮತ್ತು ಇತರ ದೇಶಗಳಲ್ಲಿ ಕಾಣಿಸಿಕೊಂಡ ಕೊರೋನವು ಹೇಗೆ ನೋಡಿದರೂ ವಿದೇಶಕ್ಕೆ ಹೋಗಿ ಬಂದವರ ಮೂಲಕವೇ ಸೋಂಕು ಹರಡುತ್ತದೆ. ಉದ್ಯೋಗಕ್ಕೆ ಹೋದವರು, ವಿದ್ಯಾಭ್ಯಾಸಕ್ಕೆ ಹೋದವರು, ಮೋಜು ಮಸ್ತಿಗಾಗಿ ಹೋದವರು ಬಹುತೇಕ ಅರ್ಥಿಕವಾಗಿ ಸದೃಢರಾದವರು. ಇವರೆಲ್ಲ ಸಾಮಾನ್ಯ ಜನರ ಜೊತೆಯಲ್ಲಿ ಬೆರೆಯುವುದು ಕೈ ಬೆರಳ ಎಣಿಕೆಯಷ್ಟು ವಿರಳ. ಅಲ್ಲದೆ ತಮ್ಮ ಕುಟುಂಬದ ಹೊರತಾಗಿ ಜನಸಾಮಾನ್ಯರಿಂದ ಬೇರ್ಪಟ್ಟ ಮತ್ತೊಂದು ಮನುಷ್ಯ ಗುಂಪೆಂದು ಭಾವಿಸಿ ಶ್ರೇಷ್ಠತೆಯ ವ್ಯಸನದಲ್ಲಿಯೇ ಇರಲು ಬಯಸುತ್ತಾರೆ. ಹೀಗೆ ಭಾರತದ ಸಾಮಾಜಿಕ ವ್ಯವಸ್ಥೆಯೂ ಒಂದೇ ತೆರನಾಗಿ ಕಾಣದೆ ಭಿನ್ನವಾಗಿದ್ದಾಗ, ಕೊರೋನ ವೈರಸ್ ಬಹುತೇಕವಾಗಿ ಮೂರನೇ ಹಂತದ ಅಥವಾ ಸಮುದಾಯ ಹಂತಕ್ಕೆ ಸೋಂಕು ತಗಲುವ ಸಾಧ್ಯತೆ ಕಡಿಮೆ. ಇನ್ನು ಮುಸಿಮರ ದಿಲ್ಲಿಯ ತಬ್ಲೀಗಿಗಳ ಸೋಂಕು ವಿಚಾರವು ವಿದೇಶದಿಂದ ಬಂದಿರುವುದರಿಂದಲೇ ಬಂದಿದ್ದು. ಈ ಸಮುದಾಯಗಳಲ್ಲಿ ಬಹುತೇಕ ತುಂಬು ಕುಟುಂಬದವರಿರುವ ಕಾರಣಕ್ಕೆ ತುಸು ಹೆಚ್ಚು ಎಂಬಂತೆ ಹರಡುತ್ತಿದೆಯಾದರೂ ಜೀವದ ಭಯ ಸೋಂಕಿನ ಕೊಂಡಿಯನ್ನು ಕಳಚಿಕೊಳ್ಳುವ ಜಾಗೃತಿ ಮೂಡದೆ ಇರುವುದಿಲ್ಲ.

ಪಂಪ ಕವಿಯ ‘ಮನುಷ್ಯ ಜಾತಿ ತಾನೊಂದೆ ವಲಂ’ ಮತ್ತು ಬಸವಣ್ಣನವರ ‘ಇವನಮ್ಮವ ಇವನಮ್ಮವ’ ಎಂಬ ಆಶಯಗಳು ಪುಸ್ತಕ ಪುಟಗಳಿಂದ ಪ್ರಭಾವ ಬೀರಿದ್ದು ತುಂಬಾ ಕಡಿಮೆ. ಸಾಮಾಜಿಕ ಅಂತರ ಎಂಬುದು ಅನಿಷ್ಠದ ಪದವೆಂದು ವಿಶ್ವಸಂಸ್ಥೆಯ ನಿಲುವಾಗಿದ್ದರೂ ಭಾರತದಲ್ಲಿ ಮಾತ್ರ ಆ ಪದವನ್ನೇ ಜನರ ಮನಸ್ಸಿನಲ್ಲಿ ಭಿತ್ತತೊಡಗಿದೆ. ಮಾಧ್ಯಮಗಳ ತಪ್ಪು ಸಂದೇಶಗಳು, ಸುಳ್ಳುಸುದ್ದಿಗಳು, ಧಾರ್ಮಿಕ ನಂಬಿಕೆಗಳಿಂದ ಜನರು ಕಂಗಾಲಾಗಿದ್ದಾರೆ. ಕೊರೋನ ಸೋಂಕಿತ ಸಂಖ್ಯೆಗಳ ಕುರಿತು ಅನುಮಾನಿಸುವ, ಧರ್ಮಗಳನ್ನು ಹುಡುಕಿ ಕೋಮುದ್ವೇಷವನ್ನು ಬಿತ್ತುತ್ತಿರುವವರಿಗೆ ಸೋಂಕಿತರ ಜಾತಿ ಸಮೀಕ್ಷೆಯನ್ನು ಮಾಡಿಸಬೇಕಿದೆ. ಆ ಮೂಲಕ ಚಾತುರ್ವರ್ಣದ ಆಧುನಿಕ ಪರಿಕಲ್ಪನೆಯು ಭಾರತವನ್ನು ಒಡೆದು ಆಳುತ್ತಿರುವ ಬಗ್ಗೆ ವಿಶ್ವಸಂಸ್ಥೆಗೆ ಭಾರತದ ಮೂಲ ಸಮಸ್ಯೆಗಳು ತಿಳಿಯುತ್ತವೆ. ಪ್ರಾಚೀನ ಕಾಲದಿಂದಲೂ ಬಹುಜತನದಿಂದ ಕಾಪಾಡಿಕೊಂಡ ಜಾತಿ, ಅಂತಸ್ತು, ವೃತ್ತಿ, ಮಾರುಕಟ್ಟೆಗಳ ಮೂಲಕ ಮನುಷ್ಯನಲ್ಲಿ ಸೃಷ್ಟಿಸಿರುವ ಅಂತರಗಳ ಅಮಾನವೀಯ ನಡತೆಗಳು ಕೊರೋನದಿಂದಾರೂ ವಿಶ್ವವ್ಯಾಪಿ ಪರಿಚಯವಾಗಲಿ. ಸ್ವಚ್ಛ, ಆರೋಗ್ಯ, ಸಮಾನತೆಯ ಸಮಾಜಕ್ಕೆ ಕೊರೋನ ವೈರಸ್ ಮುನ್ನುಡಿ ಬರೆಯಲಿ.

share
ಡಾ. ಎಂ.ವೇದಾಂತ ಏಳಂಜಿ
ಡಾ. ಎಂ.ವೇದಾಂತ ಏಳಂಜಿ
Next Story
X