ಲಾಕ್‍ಡೌನ್: ರಸ್ತೆ ಬದಿ ಬಿದ್ದಿದ್ದ ಹದ್ದಿಗೆ ಆಹಾರ ನೀಡಿದ ಪೊಲೀಸರು
ಬೆಂಗಳೂರು, ಎ.17: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿರುವ ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರು ಮಾತ್ರವಲ್ಲದೆ, ಪ್ರಾಣಿ ಪಕ್ಷಿಗಳಿಗೂ ಕಷ್ಟಕರ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ನಡುವೆ ರಸ್ತೆ ಬದಿ ಬಿದ್ದಿದ್ದ ಹದ್ದಿಗೆ ಆಹಾರ ನೀಡಿ, ಮಡಿವಾಳ ಸಂಚಾರ ಠಾಣಾ ಪೊಲೀಸರು, ಮಾನವೀಯತೆ ಮೆರೆದಿದ್ದಾರೆ.
ಶುಕ್ರವಾರ ಹದ್ದೊಂದು ಆಹಾರ ಹುಡುಕುತ್ತಾ ಏಕಾಏಕಿ ಕುಸಿದು ಕೆಳಗೆ ಬಿದ್ದಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಪಿಎಸ್ಸೈ ಶಿವರಾಜ್ ಕುಮಾರ್ ಅಂಗಡಿ, ಪೇದೆಗಳಾದ ಲೋಕೇಶ್, ಮಲ್ಲಿಕಾರ್ಜುನ್ ಪಕ್ಷಿಗೆ ಆಹಾರ ನೀಡಿ ಆರೈಕೆ ಮಾಡಿದ್ದಾರೆ.
ಲಾಕ್‍ಡೌನ್ ಒತ್ತಡದ ನಡುವೆಯೂ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Next Story





