ರಸ್ತೆಯಲ್ಲಿ ನೋಟುಗಳನ್ನೆಸೆದ ಅಪರಿಚಿತ
ಇಂದೋರ್,ಮಾ.17: ಅಪರಿಚಿತ ವ್ಯಕ್ತಿಯೊಬ್ಬನ ರಸ್ತೆಯಲ್ಲಿ ನೋಟುಗಳನ್ನು ಎಸೆದುಹೋದ ಘಟನೆಯು ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಮಧ್ಯಪ್ರದೇಶದ ಇಂದೋರ್ನಲ್ಲಿ ಗುರುವಾರ ನಡೆದಿದ್ದು, ಜನರನ್ನು ಭಯಭೀತಗೊಳಿಸಿದೆ.
ನಗರದ ಖಟಿಪುರ ಪ್ರದೇಶಲ್ಲಿರುವ ಲಾಡ್ಜ್ ಒಂದರ ಮುಂಭಾಗದ ರಸ್ತೆಯಲ್ಲಿ 20,50,100,200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಬಿದ್ದಿರುವುದು ಗುರುವಾರ ಸ್ಥಳೀಯರ ಗಮನಕ್ಕೆ ಬಂದಿತ್ತು. ಕಾರಿನಲ್ಲಿ ಆಗಮಿಸಿದ ಅಪರಿಚಿತನೊಬ್ಬ ಈ ನೋಟುಗಳನ್ನು ಎಸೆದಿರುವುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಆದಾಗ್ಯೂ ಈ ನೋಟುಗಳು ತಮಗೆ ಸೇರಿದ್ದೆಂದು ಹೇಳಿಕೊಂಡು ಯಾರೂ ಈತನ ತಮ್ಮನ್ನು ಸಂಪರ್ಕಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ ಕೊರೋನ ವೈರಸ್ ಸೋಂಕು ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ನೋಟುಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಇಂಧೋರ್ನ ಉಪ ಮಹಾನಿರೀಕ್ಷಕ ಹರಿನಾರಾಯಣ ಮಿಶ್ರಾ ತಿಳಿಸಿದ್ದಾರೆ.
Next Story