ಲಾಕ್ಡೌನ್ ಮಧ್ಯೆ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ ಉದ್ಯಮಿ ವಿರುದ್ಧ ಎಫ್ಐಆರ್
ಹೊಸದಿಲ್ಲಿ,ಎ.18: ಕೊರೋ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರಿರುವ ನಡುವೆಯೂ ತನ್ನ ಪುತ್ರನ ಹುಟ್ಟುಹಬ್ಬವನ್ನು ಆಚರಿಸಿದ್ದಕ್ಕಾಗಿ ಉತ್ತರಪ್ರದೇಶದ ಗೋರಖ್ಪುರದ ಉದ್ಯಮಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದ ಬೆಟಿಯಾಹಟಾ ಪ್ರದೇಶದ ವಸತಿ ಸಂಕೀರ್ಣದಲ್ಲಿ ನಡೆದ ಹುಟ್ಟುಹಬ್ಬದ ಸಮಾರಂಭದಲ್ಲಿ 50ಕ್ಕೂ ಅಧಿಕ ಅತಿಥಿಗಳು ಪಾಲ್ಗೊಂಡಿದ್ದರು.
ಈ ಸಮಾರಂಭದ ಛಾಯಾಟಿತ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಅತಿಥಿಗಳು ಸಾಮಾಜಿಕ ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಉದ್ಯಮಿಯಿದ್ದ ಅಪಾರ್ಟ್ಮೆಂಟ್ನ ಹೊರಭಾಗದಲ್ಲಿ ಸ್ಥಾಪಿಸಲಾದ ಮಳಿಗೆಗಳು ಅತಿಥಿಗಳು ಆಹಾರಸೇವಿಸುತ್ತಿರುವುದು ಕೂಡಾ ಕಂಡುಬಂದಿದೆ. ಅಪಾರ್ಟ್ಮೆಂಟ್ ಉಳಿದ ನಿವಾಸಿಗಳು ವಿರೋದ ಹೊರತಾಗಿಯೂ, ಉದ್ಯಮಿಯು ಂತೋಷಕೂಟ ಆಯೋಜಿಸಿದ್ದನೆಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಹುಟ್ಟುಹಬ್ಬದ ಸಮಾರಂಭದ ವಿಡಿಯೋ ಅಸಲಿಯೆಂದು ತಿಳಿದುಬಂದಿದ್ದು, ಉದ್ಯಮಿ ಹಾಗೂ ಲಾಕ್ಡೌನ್ ಉಲ್ಲಂಘಿಸಿದ ಅಪರಿಚಿತದ ವ್ಯಕ್ತಿಗಳ ವಿರುದ್ಧ ಎಫ್ಏರ್ ದಾಖಲಿಸಲಾಗಿದೆ. ಸೋಂಕುರೋಗಗಳ ಕಾಯ್ದೆ, ವಿಕೋಪ ನಿರ್ವಹಣಾ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುಮಿತ್ ಶುಕ್ಲಾ ತಿಳಿಸಿದ್ದಾರೆ.