ಲಿವರ್‌ಪೂಲ್ ಲೆಜೆಂಡ್ ಡಾಲ್‌ಗ್ಲಿಶ್ ಗೆ ಕೊರೋನ ವೈರಸ್ ಸೋಂಕು

ಲಂಡನ್,ಎ.17: ಲಿವರ್‌ಪೂಲ್ ಎಫ್‌ಸಿ ದಂತಕತೆ ಕೆನ್ನಿಡಾಲ್‌ಗ್ಲಿಶ್ ಅವರ ಕೊರೋನ ವೈರಸ್‌ನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಆದರೆ, ಕಾಯಿಲೆಯ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ಅವರ ಕುಟುಂಬ ಮೂಲಗಳು ಶುಕ್ರವಾರ ತಿಳಿಸಿವೆ.
ಸ್ಕಾಟ್ಲೆಂಡ್ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರ 69ರ ಹರೆಯದ ಡಾಲ್‌ಗ್ಲಿಶ್ ಸೆಲ್‌ಟಿಕ್‌ನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ್ದರು. ಸೋಂಕಿನ ಕಾರಣಕ್ಕೆ ಬುಧವಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
‘‘ಈ ಹಿಂದೆ ಕಾಯಿಲೆಯ ಯಾವುದೇ ಲಕ್ಷಣ ಕಾಣಿಸದಿದ್ದರೂ ಅವರಲ್ಲಿ ಕೋವಿಡ್-19 ಸೋಂಕು ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ದುರದೃಷ್ಟವಶಾತ್ ಟೆಸ್ಟ್ ಪಾಸಿಟಿವ್ ಆಗಿದೆ. ಆದರೆ ಅವರಲ್ಲಿ ಯಾವುದೇ ರೋಗ ಲಕ್ಷಣವಿಲ್ಲ. ಆಸ್ಪತ್ರೆಗೆ ದಾಖಲಾಗುವ ಮೊದಲು ಸಲಹೆ ನೀಡಿದ್ದಕ್ಕಿಂತ ಹೆಚ್ಚಿನ ಅವಧಿ ತನ್ನ ಕುಟುಂಬದಿಂದ ಸ್ವಯಂ ಪ್ರತ್ಯೇಕವಾಗಿದ್ದರು. ಸರಕಾರದ ಹಾಗೂ ತಜ್ಞರ ಸಲಹೆ ಸೂಚನೆ ಅನುಸರಿಸುವಂತೆ ಎಲ್ಲರಲ್ಲೂ ವಿನಂತಿಸಿಕೊಂಡಿದ್ದರು’’ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
Next Story





