ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಆಶ್ರಯ ಪಡೆಯುವ ನಿರೀಕ್ಷೆಯಲ್ಲಿ ಟೋಕಿಯೊದ ವಸತಿರಹಿತರು
ಟೋಕಿಯೊ, ಎ.18: ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನ ಕ್ರೀಡಾಗ್ರಾಮವನ್ನು ಕೊರೋನವೈರಸ್ ಪಿಡುಗು ನಿವಾರಣೆಯಾಗುವ ತನಕ ತಮಗೆ ಆಶ್ರಯ ಪಡೆಯಲು ಒದಗಿಸಬೇಕೆಂದು ವಸತಿರಹಿತರ ಗುಂಪುಗಳ ಪ್ರತಿನಿಧಿಗಳು ವಿನಂತಿಸಿದ್ದಾರೆ
ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಹಾಗೂ ನಗರದ ಸರಕಾರಕ್ಕೆ ಆನ್‌ಲೈನ್ ಅರ್ಜಿ ಮೂಲಕ ಮನವಿ ಸಲ್ಲಿಸಲಾಗಿದೆ. ಮನವಿ ಪತ್ರಕ್ಕೆ 10,000 ವಸತಿಹೀನರು ಸಹಿಹಾಕಿದ್ದಾರೆ. ಟೋಕಿಯೊ ಬೇನಲ್ಲಿರುವ ಅತ್ಯಂತ ದೊಡ್ಡ ವಸತಿ ಕಾಂಪ್ಲೆಕ್ಸ್ ಬಳಸಿಕೊಳ್ಳಲು ಅನುಮತಿ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.
ಕ್ರೀಡಾಗ್ರಾಮವನ್ನು 11,000 ಅಥ್ಲೀಟ್‌ಗಳು ಹಾಗೂ 4,400 ಪ್ಯಾರಾಲಿಂಪಿಕ್ ಅಥ್ಲೀಟ್‌ಗಳಿಗಾಗಿ ನಿರ್ಮಿಸಲಾಗಿತ್ತು. ಕ್ರೀಡಾಗ್ರಾಮ ಸಂಪೂರ್ಣ ಸಜ್ಜಾಗಿದ್ದು, ಕೊರೋನವೈರಸ್‌ನಿಂದಾಗಿ ಈ ವರ್ಷನಡೆಯಬೇಕಾಗಿದ್ದ ಒಲಿಂಪಿಕ್ಸ್ 2021ರ ಜುಲೈ 23ಕ್ಕೆ ಮುಂದೂಡಲ್ಪಟ್ಟ ಕಾರಣ ಕ್ರೀಡಾಗ್ರಾಮ ಖಾಲಿ ಖಾಲಿಯಾಗಿದೆ.
Next Story





