ನೈರ್ಮಲ್ಯ ಕಾರ್ಮಿಕರ ಮೇಲೆ ಕೊಡಲಿಯಿಂದ ದಾಳಿಗೈದ ಗುಂಪು

ಭೋಪಾಲ್: ರಸ್ತೆಗಳನ್ನು ಸ್ವಚ್ಛಗೊಳಿಸಲು ತೆರಳಿದ್ದ ಮಧ್ಯ ಪ್ರದೇಶದ ನೈರ್ಮಲ್ಯ ಕಾರ್ಮಿಕರ ಮೇಲೆ ದೇವಸ್ ಜಿಲ್ಲೆಯ ಕೊಯ್ಲಾ ಮೊಹಲ್ಲಾದಲ್ಲಿ ಒಂದು ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಒಬ್ಬ ಪೌರ ಕಾರ್ಮಿಕನ ಮೇಲೆ ಕೊಡಲಿಯಿಂದ ದಾಳಿ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಕೈಗಳಿಗೆ ತೀವ್ರ ಗಾಯಗಳುಂಟಾಗಿವೆ. ಕೈಗಳಲ್ಲಿ ಕೋಲುಗಳನ್ನು ಹಿಡಿದುಕೊಂಡ ಗುಂಪು ಕಾರ್ಮಿಕರನ್ನು ಎಳೆದಾಡುತ್ತಿರುವುದು ವೀಡಿಯೋಗಳಲ್ಲಿ ಕಾಣಿಸಿದೆ. ಒಬ್ಬನ ಶರ್ಟ್ ಹರಿದಿರುವುದು ಹಾಗೂ ಗುಂಪೊಂದು ಆತನನ್ನು ದರದರನೆ ಎಳೆಯುತ್ತಿರುವುದೂ ಕಾಣಿಸಿದೆ.
ಘಟನೆ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಬೇಕಾಗಿರುವ ಆತನ ಸೋದರ ನಾಪತ್ತೆಯಾಗಿದ್ದಾನೆ.
Next Story





