ಕಾರವಾರ: ಮತ್ತೋರ್ವ ಕೊರೋನ ವೈರಸ್ ಸೋಂಕಿತ ಗುಣಮುಖ
ಕಾರವಾರ : ಕೊರೋನ ಸೋಂಕು ತಗುಲಿದ್ದ ಜಿಲ್ಲೆಯ ಮತ್ತೋರ್ವ ಗುಣಮುಖನಾಗಿದ್ದು ಇಂದು ತಾಲೂಕಿನ ಕದಂಬ ನೌಕಾನೆಲೆಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ದುಬೈನಿಂದ ಬಂದಿದ್ದ ಭಟ್ಕಳ ಮೂಲದ ವ್ಯಕ್ತಿಗೆ ಮಾರ್ಚ್ 27 ರಂದು ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತಕ್ಷಣ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನೌಕಾನೆಲೆಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖನಾದ ಹಿನ್ನಲೆಯಲ್ಲಿ ಇಂದು ಡಿಸ್ಚಾರ್ಜ್ ಮಾಡಿದ್ದು ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿದ್ದ 11 ಜನರಲ್ಲಿ 9 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ.
ಇತ್ತಿಚೆಗೆ ಕೊರೋನ ಸೋಂಕು ತಗುಲಿದ್ದ ಗರ್ಭಿಣಿ ಮಹಿಳೆಗೆ ಉಡುಪಿಯಲ್ಲಿ ಚಿಕಿತ್ಸೆ ಕೊಡುತ್ತಿದ್ದು ಆಕೆಯ ಪತಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Next Story





